Sunday 30 December 2012

ಒಂದು ಹೂವು ಅಂದ್ರೆ ಒಂದು ಹೆಣ್ಣು .. !!



ಮೊದಲನೇ ಮಾತು .. ಇದು ಕವನವಲ್ಲ ...
ಕೇವಲ ಮನದಾಳದ ಕೆಲವು ಮಾತುಗಳು ... 

ಸುಂದರವಾದ ಹೂವಿನ ಮಾಲೆ ಸಿಕ್ಕರೆ ..
ಭಕ್ತಿಯಿಂದ ದೇವರಿಗೆ ಹಾಕ್ತೀರೋ ..
ಅಥವಾ
ಪ್ರೀತಿಯಿಂದ ಹೆಂಡತಿಗೆ ಕೊಡ್ತೀರೋ ...
ನಿಮ್ಮಿಷ್ಟ .. 
ಆದರೆ ಸುಂದರವಾಗಿರೋ ಹೂವಿನ ಮಾಲೆಯನ್ನ
ಹರಿದು ಹಿಸುಕಿ ತುಳಿದು ಹಾಳ್ ಮಾಡೋದ್ ತುಂಬಾ ತಪ್ಪು ..

ಪುಟ್ಟ ಪುಟ್ಟ ಹೂವುಗಳನ್ನ
ತುಂಬಾ ಜೋಪಾನವಾಗಿ
ಮಾಲೆ ಕಟ್ಟಿ ಕಷ್ಟ ಪಟ್ಟು ಜೀವನ ಮಾಡೋ ..
ಜನರು ನಂಬಿರೋದು ಆ ಪುಟ್ಟ ಪುಟ್ಟ ಹೂವುಗಳನ್ನೇ ... 

ಇಲ್ಲಿ ಇನ್ನೊಂದು ರೀತಿ ಯೋಚನೆ ಮಾಡಿ ..
ಚಿಕ್ಕವರಿಗೂ ಸುಲಭವಾಗಿ ಅರ್ಥ ಆಗಲಿ ಅಂತಾ ಸರಳವಾಗಿ ಬರೆದಿದ್ದೇನೆ ..
ಪ್ರೀತಿಯಿಂದ ನೋಡ್ಕೊಂಡ್ರೆ ಆ ಹೂವಿನ (ಹೆಣ್ಣಿನ) ಆಯುಷ್ಯ ತುಂಬಾ ಕಾಲ ..
ಒಂದು ಹೂವು ಸುಂದರವಾಗಿ ಕಾಣೋದಷ್ಟೇ ಅಲ್ಲಾ 
ನಮ್ಮ ನಿತ್ಯ ಬದುಕಿನಲ್ಲಿ ಆರೋಗ್ಯಕರವಾಗಿ ಬದುಕಲು ಸಹಾಯ ಆಗುತ್ತೆ .. 
ಹೂವಿನ ಜೊತೆಯಲ್ಲಿ ಹೆಚ್ಚಾಗಿ ಹಸಿರು ಇರುತ್ತೆ .. 
ಆ ಹಸಿರು ನಮ್ಮ ಬದುಕಿನ ಉಸಿರು .. !!

ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ .. !!!!!!



ಕೆಲವು ಸಾರಿ ತುಂಬಾ ಸಿಟ್ಟು
ಕೆಲವು ಸಾರಿ ತುಂಬಾ ಬೇಸರ
ಕೆಲವು ಸಾರಿ ತುಂಬಾ ಆತುರ
ಕೆಲವು ಸಾರಿ ತುಂಬಾ ಚಿಂತೆ
ಕೆಲವು ಸಾರಿ ತುಂಬಾ ಖುಷಿ

ಕೆಲವು ಸಾರಿ ಇನ್ನೂ ಏನೇನೋ ಆಗುತ್ತೆ
ಯಾವುದಕ್ಕೆ ಇದೆಲ್ಲಾ ಹೀಗೆಲ್ಲಾ ಅಂದ್ರೆ 
ಅದು ಒಂದೇ ವಿಚಾರ ತುಂಬಾ ಕಾಡುತ್ತೆ
ಯಾಕೆಲ್ಲಾ ಕ್ಷಣ ಕ್ಷಣ ಹೀಗಾಗುತ್ತೆ ಅಂದ್ರೆ
ಬಣ್ಣ ಬಣ್ಣದ ಕನಸುಗಳು ಮಾಯವಾಗಿರುತ್ತೆ
~~~~~~~~~~~~~~~~~~~~~~~~~~~~~~
ಪ್ರತಿಭಟನೆ ಮಾಡಬೇಕು ಅಂತಾ ಕಪ್ಪು ಬಣ್ಣ ಬಳಸ್ತಾರೆ .. ಆದ್ರೆ ಅದರ ಜೊತೆ ನಮ್ಮ ಮನದಲ್ಲಿ ಉಂಟಾಗುವ ವಿಭಿನ್ನ ಭಾವನೆಗಳನ್ನ ಒಂದೊಂದು ಬಣ್ಣದಲ್ಲಿ ಪ್ರತಿಬಿಂಬಿಸಿದಾಗ, ಅಲ್ಲಿ ಕೋಪದ ಕೆಂಪು , ಶಾಂತಿಯ ಬಿಳಿ , ಭಯದ ಕಪ್ಪು , ಬೇಸರದ ನೆರಳಿನಂತೆ ಬೂದು , ಆಸೆಯ ಆಗಸದಂತೆ ನೀಲಿ , ಸಂತಸದ ಹಸಿರು , ಭೂಮಾತೆಯ ಭಕ್ತಿ ಗೌರವದಲ್ಲಿ ಕಂದು .... ಹೀಗೆ ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ ಕಳೆದು ಹೋಗುತ್ತೆ .. ಏನೂ ಇಲ್ಲಾ ಅಂತಾ ಅಂದ್ರೆ ಜೀವನವೇ ಕಪ್ಪಾಗಿ ಕಾಣುತ್ತೆ... ಸ್ವಲ್ಪ ಸ್ವಲ್ಪ ಆಸೆಗಳು, ಕನಸುಗಳು ನಿಜವಾಗೋ ಕಾಲ ಬಂದ್ರೆ ಬದುಕಲ್ಲಿ ಹಸಿರು ನೀಲಿ ಬಿಳಿ ತುಂಬಾ ಇಷ್ಟ ಆಗುತ್ತೆ .. ಆದರೆ ಈ ಅನ್ನೋದು ಪ್ರೀತಿಗೂ ಸರಿ ದ್ವೇಷಕ್ಕೂ ಸರಿ .. ಹಲವಾರು ಜನಗಳ ವಿಭಿನ್ನ ಅನಿಸಿಕೆಗಳ ನಡುವೆ ನಿಜವಾದ ನ್ಯಾಯ ಮರೆಯಾಗಿ ಹೋಗ್ತಿದೆ.. !!

Sunday 15 July 2012

ಎಲ್ಲಿದೆ ಆ ಹನಿ ಹನಿ ಜೇನ ಹನಿ ... ಅದೆಲ್ಲಿರುವನೋ ಮಳೆರಾಯ .. !!

ಮೇಲೊಂದು ಕೆಳಗೊಂದು ರೈಲ್ ಬಿಡೋಕ್ಕೆ ...
ಪಕ್ಕಪಕ್ಕದಲ್ಲೆ ನಾಲ್ಕ್ ಗಾಲಿ ಗಾಡಿಗಳು ರೇಸ್ ಆಡೋಕ್ಕೆ...
ನಾಲ್ಕ್ ನಿಮಿಷ ಕೂತು ಟೀ ಕಾಫಿ ಕುಡಿಯೋಕ್ಕೆ ಅರಮನೆ ಅಷ್ಟು ಜಾಗ...
ಊರು ಉದ್ದಾರ ಅನ್ನೋ ನೆಪದಲ್ಲಿ ಹೊಲಾನೆಲ್ಲಾ ಹಾಳ್ ಮಾಡಿ ಕಳ್ಳಾಸ್ತಿ... ಸುಳ್ಳಾಸ್ತಿ .. ಅಂತಾ ಹೆಸರಿಗೊಂದಿಷ್ಟು , ಹಂಚೋಕೊಂದಿಷ್ಟು ..
ಇನ್ನೂ ಅದೆಲ್ಲಿ ಉಳಿಯುತ್ತೆ ಹರಿಸು .. ಅದುವೇ ಮಳೆರಾಯನ ಕೈ ಬೀಸಿ ಕರೆಯೋ ಉಸಿರು .. 
ಅಜ್ಜಿ ಕಥೆ ಅಂತಾ ಅದು ಇದು ಕೇಳಿ ಅಚಾರ ಮಾಡೋ ಕಾಲಕ್ಕೆ  ಸರಿಯಾಗಿ ಟೈಮ್ ಪಾಸ್ ಆಗಿ ಅದೆಲ್ಲೋ ಹನಿ ಉದುರುತ್ತೆ ಅಂದ್ರೆ .. ನಾ ಮಂತ್ರ ಊದಿದ್ದು ಆ ಮಳೆ ಉದುರೋಕ್ಕೆ ಅಂದ್ರೆ .. ಅದೆಂಗೆ ಜನ ತಲೆ ಅಲ್ಲಾಡಿಸ್ತಾರೋ ದೇವರೇ ಬಲ್ಲ... 
ಮಳೆ ಬರೋಕ್ಕೆ ಏನೇನೋ ಮಾಡಬೇಕಾ ... ಭೂಮಿಯಿಂದ ನೀರು ಆವಿ , ಆಮೇಲೆ ಮೋಡ , ಅದು ನಂತರ ಮಳೆ .. 
ಆದರೆ ಇಲ್ಲಿ ಭೂಮಿಯಲ್ಲಿ ಆ ನೀರೆ ಇಲ್ಲಾ.... ಊರ ಮಧ್ಯೆ ಫಾರಿನ್ ಕಂಪನಿ ಬಿಸಿನೆಸ್ ಮಾಡೋಕ್ಕೆ ಕೆರೆ ಮುಚ್ಚಿ ಬಿಲ್ಡಿಂಗ್ ಎಬ್ಬಿಸಿ .. ಬಾ ಬಾ ಮಳೆಯೇ ಅಂದ್ರೆ ಅದೆಲ್ಲಿ ಅಂತಾ ಬರಬೇಕು... ಮೇಲಿಂದ ಆ ಮಳೆರಾಯ ನೋಡ್ತಾನೆ ಹಸಿರು ಬಣ್ಣ ಅಲ್ಲಾಡ್ತಾ , ಒಲಾಡ್ತಾ ಇದ್ರೆ ಸಾಕು , ಆ ಜಾಗಕ್ಕೆ ಹೋಗಿ ಬೀಳ್ತಾನೆ .. ಗಾಳಿ ಬೀಸಿದಲ್ಲಿ ಗಾಳಿಪಟ .. ಗಾಳಿ ಎಳೆದಲ್ಲಿ ಹನಿಹನಿ ಅಮೃತ .. ಆ ಗಾಳಿ ಓಡಲು , ಹಾರಲು ದಿಕ್ಕು ಬದಲಿಸಿ ಕಾರಣವು ಹರಿಸು ತೂಗಿ ಕೂಗುವ ವಿಸ್ಮಯವು .. :)ಅರಿತವರಿಗದು ಅಚ್ಚರಿಯ ಸಂಗತಿ ಏನಲ್ಲಾ .. ಆದರೆ ಅರಿತು ಅದರ ಕುರಿತು ಅನುಮಾನಿಸುವುದೇ ಅಲ್ಲಿ ಇಲ್ಲಸಲ್ಲದ ಆಚಾರಗಳ ಹುಟ್ಟಿನಲ್ಲಿ ಒಂದು ಸಂಪ್ರದಾಯವನ್ನೇ ಸೃಷ್ಟಿಸುತ್ತದೆ... ಇದರಿಂದ ಯಾರಿಗೆ ಅದೆಷ್ಟು ಪ್ರಯೋಜನ ಎಂಬುದು ಇನ್ನೂ ತಿಳಿದು ಸಹ ಯಾರು ತಿಳಿಯದಂತಹಾ ವಿಷಯ ವಿಚಾರವಾಗಿ ಕಾಣಿಸುವುದಲ್ಲದೆ ... ಸತ್ಯವನ್ನು ಮರೆಮಾಚುವಂತೆ ಮಾಡುತ್ತಿದೆ..

(ಅವಶ್ಯವೆನ್ನಿಸಿದರೆ ಈ ವಿಚಾರದಲ್ಲಿ ಮತ್ತೆ ಹಲವು ಮಾತುಗಳನ್ನು ಮುಂದುವರೆಸುತ್ತೇನೆ.....)

ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...

ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...
ಮುಂದೇನು ಎನ್ನುವುದನ್ನು ತಿಳಿಯುವುದು ಕಷ್ಟ...
ಹಿಂದೆನಿತ್ತು ಎನ್ನುವುದು ಸಹ ಅಷ್ಟೇ ಅಚ್ಚರಿಯನ್ನು ಕೊಡುತ್ತದೆ...

ಒಂದು ರೀತಿಯಲ್ಲಿ ಯಾವುದನ್ನು ಯಾರು ಬರೆಯುತ್ತಾರೋ ಅದು ನಿಜ
ಮತ್ತು ಅದಕ್ಕಷ್ಟೇ ಆಧಾರಗಳನ್ನು ಹುಡುಕಿ ಅದು ನಿಜವೋ ಅಲ್ಲವೋ ..
ಎನ್ನುವ ಸಂಶೋಧನೆಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ...
ಯಾವುದೋ ಒಂದು ಬೆಟ್ಟದಡಿಯಲ್ಲಿ ಹಳೆಯ ಅರಮನೆ ಹೂತು ಹೋಗಿದೆ
ಮತ್ತು ಅಲ್ಲಿ ಯಾರ ಆಳ್ವಿಕೆ ಇತ್ತು ಹಾಗೂ ಎಷ್ಟು ವಜ್ರ , ಚಿನ್ನ , ಬೆಳ್ಳಿ , ಮುತ್ತುರತ್ನ ಹವಳದ ಒಡವೆಗಳು ಈಗಲೂ ಸಿಗುತ್ತದೆ ಎಂದರೆ .. ಆ ಬೆಟ್ಟವನ್ನೇ ಕಡಿದು , ಪುಡಿ ಪುಡಿ ಮಾಡಿ , ಕೊನೆಯಲ್ಲಿ ಏನೂ ಸಿಗದಿದ್ದರೂ ಸಹ ಕಟ್ಟಡಗಳಿಗೆ ಕಲ್ಲಾದರೂ ಸಿಕ್ಕಂತೆ ಆಗಲಿ ಎನ್ನುವ ಆಲೋಚನೆಯಲ್ಲಿ ಎಲ್ಲಾ ಬೆಟ್ಟಗುಡ್ಡಗಳ ಕಡಿದು ಹಾಕಿ , ನಿಜವಾದ ಇತಿಹಾಸವನ್ನೇ ಸ್ವಾರ್ಥ ಲಾಭಕ್ಕಾಗಿ ಸಂಶೋಧನಾ ಕಾರ್ಯದಲ್ಲಿ ರಾಜಕೀಯ ನಡೆಸುವ ಕಾಲವಿದು .. ಇಲ್ಲಿ ನಾವು ಏನನ್ನು ಓದಬೇಕು ಎಂದು ಆಲೋಚಿಸುತ್ತೆವೋ ಅದು ಶಾಲಾಕಾಲೇಜು ಪಠ್ಯಕ್ರಮದಲ್ಲಿ ಕೇವಲ ಪರಿಚಯ ಮಾಡಿಸುವ ವಿಷಯವಾಗಿ ಮಾತ್ರವೇ ಇರುತ್ತದೆ.. ಸಂಪೂರ್ಣ ಮಾಹಿತಿ ಅನ್ನೋದನ್ನು ಬೇರೆ ಕಡೆಯೇ ಪಡೆಯಬೇಕು .. 
ಕಾರಣ ಇತಿಹಾಸವೂ ಒಂದು ರೀತಿಯಲ್ಲಿ ಆಕರ್ಷಣೆಯ ವಿಚಾರ .. ಕೆಲವರಿಗೆ ರಾಜ ಮಹಾರಾಜರ ಕಥೆಗಳು ಬೇಕು , ಕೆಲವರಿಗೆ ದೇವಾಲಯಗಳು ಮತ್ತು ನೃತ್ಯಗಾರ್ತಿಯರ ಕಥೆಗಳು ಬೇಕು , ಇನ್ನೂ ಕೆಲವರಿಗೆ ಇತಿಹಾಸದಲ್ಲಿ ಕಳೆದು ಹೋಗಿದೆ ಎನ್ನುವ ವಸ್ತುಗಳ ಹುಡುಕುವ ಕಾರ್ಯದಲ್ಲಿ ಆಸಕ್ತಿ , ಮತ್ತೆ ಹಲವರಿಗೆ ಇತಿಹಾಸದ ರಾಜಕೀಯ ಬೇಕು , ಹಾಗೆಯೇ ಕೆಲವು ವಿಚಿತ್ರ ಘಟನೆಗಳ (ದೆವ್ವ , ಭೂತಗಳ , ಮಾಟ ಮಂತ್ರ ಯಂತ್ರ ತಂತ್ರಗಳ) ತಿಳಿಯುವ ಕೋರಿಕೆ.. , ಇನ್ನೂ ಹಲವರಿಗೆ ಇತಿಹಾಸದಲ್ಲಿ ವಿಜ್ಞಾನದ ಪಾತ್ರ ಏನು .. , ಅದೇ ರೀತಿ ಇತಿಹಾಸದಲ್ಲಿ ಸಾಹಿತಿಗಳ , ಸಾಹಿತ್ಯದ (ವಿವಿಧ ಭಾಷೆಗಳು) ಹುಟ್ಟು ಮತ್ತು ಬೆಳವಣಿಗೆಯ ಹಂತ ಹಂತದ ಬದಲಾವಣೆ .. ಇದನ್ನೆಲ್ಲಾ  ಯಾರಿಗೆ ಎಷ್ಟು ಆಸಕ್ತಿಯೋ , ಅದಕ್ಕೆ ಅನುಗುಣವಾಗಿ ಪಠ್ಯಕ್ರಮ ಸಿದ್ಧವಾಗುತ್ತದೆ .. ಯಾವುದೇ ವಿಚಾರವನ್ನು ಸತ್ಯ ಎಂದು ಹೇಳಿದಾಗ ಅಲ್ಲಿ ಒಂದು ಸಣ್ಣ ಸುಳ್ಳು ನಮಗರಿವಿಲ್ಲದಂತೆ ಸೇರಿರುತ್ತದೆ .. ಆದರೆ ಅದನ್ನು ಊಹೆಯ ಸತ್ಯ ಮತ್ತು ಸಂಶೋಧನೆಯ ಮಾಡಲು ಒಂದು ಆರಂಭ ಆಧಾರ ಎಂದು ಪರಿಗಣಿಸಿ ಒಪ್ಪಲೇಬೇಕಾಗುತ್ತದೆ .. ಅದುವೇ ಇತಿಹಾಸ ಮತ್ತು ಬದಲಾವಣೆ ಭವಿಷ್ಯ .. :)

ಬದರಿನಾಥ್ ಪಲವಳ್ಳಿಯ ನೋಟ್ ಬುಕ್...: ದಾವಣಗೆರೆಯಿಂದ...

ಬದರಿನಾಥ್ ಪಲವಳ್ಳಿಯ ನೋಟ್ ಬುಕ್...: ದಾವಣಗೆರೆಯಿಂದ...: ದಾವಣಗೆರೆಯ ಬ್ಲಾಗ್ ಮಿತ್ರ ಅಕ್ಕರೆಯಿಂದ ಕೊಟ್ಟ ಪ್ರಶಸ್ತಿ ಪತ್ರ: "ನೆನಪುಗಳ ನೆನಪು ಸದಾ ನೆನಪಾಗಿರಲು" ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ ನೀವು ಬಿಡುವ ಅಪರೂಪದ ಪ...

Friday 22 June 2012

ಒಂದು ವರ್ಷದ ಸರ್ಕಾರಿ ಶಾಲೆ (A year in government school)

ಒಂದು ವರ್ಷದ ಸರ್ಕಾರಿ ಶಾಲೆ (A year in government school)
***************************************************************
ಇದು ನಿಜ.. ಅದೇನೆಂದರೆ ನಾವು ಹುಬ್ಬಳ್ಳಿಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದೋವಾಗ ನಮಗೆಲ್ಲಾ ಒಂದು ಪುಸ್ತಕವನ್ನೇ ಮಾಡಿಸಿದ್ದರು .. ಅದಕ್ಕೆ ಹೆಸರು ಒಳ್ಳೆಯ ಕೆಲಸ .. ನಾವು ಆ ದಿನ ಮಾಡಿದ ಒಳ್ಳೆಯ ಕೆಲಸವನ್ನು ಅದರಲ್ಲಿ ಬರಿಯಬೇಕಿತ್ತು .. ಯಾವುದೇ ದಿನ ತಪ್ಪಿದರೂ ಆ ದಿನ ಮೇಷ್ಟ್ರು ತುಂಬಾ ಬೈಯುತ್ತಿದ್ದರು.. ಆದರೆ ಅದರಲ್ಲಿ ಮತ್ತೊಂದು ವಿಶೇಷ ಅಂದರೆ ನಮ್ಮ ಶಾಲೆಯಲ್ಲಿ ಚುನಾವಣೆ ಅಂತಾ ಮಾಡಿ , ಅದರಿಂದ ವಿದ್ಯಾರ್ಥಿ ನಾಯಕ ಮತ್ತು ನಾಯಕಿ ಅಂತ ಇಬ್ಬರನ್ನು ಆಯ್ಕೆ ಮಾಡ್ತಾ ಇದ್ರೂ .. ಆಗ ಮೊದಲ ಎರಡು ತಿಂಗಳು ಹುಬ್ಬಳ್ಳಿ ಊರು ಮತ್ತು ಶಾಲೆ ಹೊಸದು ಆದ್ದರಿಂದ ಸುಮ್ಮನೆ ಗೆಳಯರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕಿದ್ವಿ .. ಹೀಗೆ ದಿನಗಳು ಉರುಳಿದಂತೆ ಒಂದು ದಿನ ಆಶುಭಾಷಣ ಸ್ಪರ್ಧೆ ಅಂತಾ ನಡಿತು .. ಅದರಲ್ಲಿ ಶಾಲೆಯ ಆಟದ ಮೈದಾನ ಅನ್ನೋದು ಚೀಟಿಯಲ್ಲಿ ಸಿಕ್ಕ ವಿಷಯ .. ಅದಕ್ಕೆ ಐದು ನಿಮಿಷ ಮಾತಾಡಿದ್ದು ಕೇಳಿ ಕೆಲವು ಸ್ನೇಹಿತರು ನಮಗೇನು ಹೇಳದೆ ಚುನಾವಣೆಯಲ್ಲಿ ನಮ್ಮ ಹೆಸರು ಅಭ್ಯರ್ತಿಯಾಗಿ ಸೇರಿಸಿದ್ದಾರೆ.. ಆಗ ಬೇಡ ಅಂತಾ ಹೇಳಿ ನಮ್ಮ ಮೇಷ್ಟ್ರಿಗೆ ಹೇಳಿದ್ದಕ್ಕೆ ಹಾಗೆಲ್ಲಾ ವಾಪಾಸ್ಸು ತೆಗೆಯೋ ಹಾಗಿಲ್ಲಾ ಅಂದರು .. ನಾನು ಸಹ ಸುಮ್ಮನಾದೆ .. ಆದರೆ ಅದು ಒಂದು ಓಪನ್ ಎಲೆಕ್ಷನ್ .. ನಮ್ಮ ನೇಮ್ ಬೋರ್ಡ್ ಮೇಲೆ ಇರುತ್ತೆ .. ಅದರ ಕೆಳಗೆ ಒಬ್ಬೊಬ್ಬರೇ ಬಂದು ಒಂದು ಗೆರೆ ಹಾಕಬೇಕು (ಒಂದು ಅಂತ ಬರೀಬೇಕು) ಆಗ ಮೊದಲು ಹತ್ತು ಓಟ್ ಆಗೋವರೆಗೂ ನಮ್ಮ ಹೆಸರಿನ ಕೆಳಗೆ ಇದ್ದದ್ದು ಮೂರು ಮತ್ತು ನಮ್ಮದೊಂದು ಓಟ್ .. ಒಟ್ಟು ನಾಲ್ಕು ಮತಗಳು.. ಹಾಗೆಯೇ ಅದು ಮುಂದೆ ಮುಂದೆ ಸಾಗಿ ಮೂವತ್ತು ಓಟ್ ಮುಗಿದರೂ ಸಹ ನಾಲ್ಕೇ ಆಗಿತ್ತು .. ಇನ್ನೂ ಒಂದು ವಿಶೇಷ ಅಂದರೆ ನಮಗೆ ಎಲೆಕ್ಷನ್ ಅಲ್ಲಿ ನಿಲ್ಲೋಕ್ಕೆ ಇಷ್ಟ ಇಲ್ಲದೆ ಕಾರಣ ಬೇರೆಯವರಿಗೆ (ಅಂದರೆ ಹಿಂದಿನ ತಿಂಗಳು ಗೆದ್ದವರಿಗೆ) ಓಟ್ ಮಾಡೋಕ್ಕೆ ಹೋದರೆ , ನಮ್ಮ ಮೇಷ್ಟ್ರು ಹೇಳಿದ್ದು ಆ ರೀತಿ ಓಟ್ ಬೇರೆಯವರಿಗೆ ಹಾಕೋ ಹಾಗಿಲ್ಲಾ ಅಂತಾ.. ಅದಕ್ಕೆ ನಾವೇ ನಮ್ಮ ಹಾಕ್ಕೊಂಡಿದ್ದು .. ಅದು ಎಲ್ಲಾ ಮತದಾನ ಮುಗಿಯುವ ಅಷ್ಟೊತ್ತಿಗೆ ಒಂದು ಆಶ್ಚರ್ಯ ನಮಗಾಗಿ .. ಅದು ನಲವತ್ತಾರನೇ ಓಟ್ ಇಂದ ಎಲ್ಲ ಹುಡುಗ/ಹುಡುಗಿಯರು ನಮ್ಮ ಹೆಸರಿನ ಕೆಳಗೆ ಓಟ್ ಹಾಕಿದ್ದು.. ಅಲ್ಲಿಂದ ಇನ್ನೂರ ಮೂವತ್ತೆರಡು ಮತಗಳ ಅಂತರದಲ್ಲಿ ಗೆದ್ದ ನಂತರ ಆರು ತಿಂಗಳು ನಮ್ಮನ್ನೇ ಆಯ್ಕೆ ಮಾಡಿ ಗೆಲ್ಲಿಸುತ್ತಿದ್ದರು .. ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಹೋದ ನಾವು ಅಲ್ಲಿ ಇದ್ದದ್ದು ಎಂಟು ತಿಂಗಳು ಮಾತ್ರ .. ಹಾಗೂ ನಂತರದಲ್ಲಿ ರಾಣೆಬೆನ್ನೂರಿಗೆ ಬಂದೆವು .. ಅಲ್ಲಿಯೂ ಸರ್ಕಾರಿ ಶಾಲೆ ಹಾಗು ಅಲ್ಲಿಯೂ ಮತ್ತೆ ಒಂದು ತಿಂಗಳಾದ ಮೇಲೆ ವಿದ್ಯಾರ್ಥಿ ನಾಯಕ ಪಟ್ಟ.. ಇಷ್ಟು ಕಥೆ ನಮ್ಮ ಶಾಲಾ ದಿನಗಳ ಆ ಸವಿನೆನಪುಗಳನ್ನು ಮತ್ತೊಮ್ಮೆ ಒಂದು ನೈಜ ಕಥೆಯನ್ನಾಗಿ ಎಲ್ಲರ ಮುಂದೆ ತರಲು ಕಾರಣರಾದ ನಮ್ಮ ಸ್ನೇಹಿತರೊಬ್ಬರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ.. ಹಾಗೂ ಇದರಲ್ಲಿ (ಕಥೆಯಲ್ಲಿ) ಕೆಲವು ಮುಖ್ಯ ಅಂಶಗಳನ್ನು ಮತ್ತೊಂದು ಕಥೆಯಾಗಿ ಹೇಳುತ್ತೇವೆ... ಹಾಗೂ ಈ ಕಥೆಯಲ್ಲಿ ಆಸಕ್ತಿ ಹುಟ್ಟಿಸುವ ಅಂಶಗಳು ಏನೂ ಇಲ್ಲ.. ಇದೆಲ್ಲಾ ಕೇವಲ ನೆನಪುಗಳು (ಕಥೆಯ ಆರಂಭವಷ್ಟೇ) .. ಮಾತನಾಡುವ ಭಾಷೆ ಬದಲಾಗಿ , ವಾಸ ಮಾಡುವ ಸ್ಥಳವು ಬದಲಾಗಿ ಮರೆಯಲಾಗದ ಆ ಒಂದು ವರ್ಷ .. ಹೌದು ಅದು ನಾವು ಸರ್ಕಾರಿ ಶಾಲೆಯಲ್ಲಿ (ಹುಬ್ಬಳ್ಳಿ ಮತ್ತು ರಾಣೆಬೆನ್ನೂರು) ಕಲಿತ ದಿನಗಳ ಕಥೆಯು.. ನಮ್ಮ ಮನದಾಳದ ಮಾತುಗಳಿಗಾಗಿ ಮಾಡಿರುವ "ವಿಶೇಷ ಬರಹಗಾರ" ಬ್ಲಾಗ್ ಅಲ್ಲೂ ಸಹ ಪ್ರಕಟಿಸುತ್ತೇವೆ.. & ಇದರಲ್ಲಿ ಕೆಲವು ಲವ್ ಸ್ಟೋರಿಗಳು , ಸೆಂಟಿಮೆಂಟ್'ಗಳು , ಸಸ್ಪೆನ್ಸ್ , ಅಧ್ಯಾತ್ಮ , ಸ್ಪೋರ್ಟ್ಸ್ ... ಎಲ್ಲಾ ಸೇರಿದ ಒಂದು ಸಿನಿಮಾ ಕಥೆಯಾಗಿ ಆಗಬಹುದು .. ಹಾಗೂ ಕೆಲವರಿಗಂತೂ ಸವಿ ಸವಿ ನೆನಪು ಅಂತಾ "ಮೈ ಆಟೋಗ್ರಾಫ್" ಕನ್ನಡ ಚಲನಚಿತ್ರದ ನೆನಪು ಆಗಬಹುದು .. ಕೊನೆಯಲ್ಲಿ ನಾಯಕನಿಗೆ ಮದುವೆ ಆಗುತ್ತೆ .. ಆದರೆ ನಾ ಹೇಳುವ ಕಥೆಯು ಸಂಪೂರ್ಣ ಸ್ವಂತದ್ದು ಮತ್ತು ಈ ಕಥೆಯಲ್ಲಿ ನಾಯಕನಿಗೆ ಇನ್ನೂ ಮದುವೆ ಆಗಿಲ್ಲ.. ಇದು ಒಬ್ಬ ಸ್ನೇಹಿತರು ನೆನಪು ಮಾಡಿಸಿದ ಕಥೆ .. ಸ್ವಂತ ಅನುಭವಗಳ ಒಂದು ವರ್ಷದ ಸರ್ಕಾರಿ ಶಾಲೆಯ ಮತ್ತು ಸ್ನೇಹಿತರ ಕಥೆ.. :)
ದಯವಿಟ್ಟು ಕಾದು ನೋಡಿ ... ಆಮೇಲೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .. ಸತ್ಯವನ್ನು ಬರೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ ಆದರೆ ಈ ಮೊದಲೇ ಆರಂಭಿಸಿದ "ನಾನು ನನ್ನ ಕವನ" ಎಂಬ ಕಾಲ್ಪನಿಕ ಕಥೆಯ ಮುಗಿಸಿದ ನಂತರ , ಈ ಕಥೆಯನ್ನು ಪ್ರಾರಂಭಿಸುತ್ತೇವೆ .. ಎಲ್ಲರಿಗೂ ಶುಭವಾಗಲಿ .. 
* ಓಂ ಶ್ರೀ ಗಣೇಶಾಯ ನಮಃ *

Sunday 17 June 2012

ಚಿತ್ರಮಂದಿರಗಳು ಸಮಸ್ಯೆಗಳು



ಹೆಚ್ಚಿನ ಚಲನಚಿತ್ರಗಳ (ಉತ್ತಮ ಚಿತ್ರಗಳ) .......
ಸೋಲು (ಜನ ಮನ್ನಣೆ ಅಥವಾ ಪ್ರೋತ್ಸಾಹ ಸಿಗದಿರುವುದು) ...........

ಇದಕ್ಕೆ ಒಂದು ರೀತಿಯಲ್ಲಿ ಚಿತ್ರಮಂದಿರಗಳು ಸಹ ಕಾರಣವಾಗುತ್ತಿವೆ..
ಚಿತ್ರಮಂದಿರಗಳ ಶುಚಿತ್ವ , ನೀರಿನ ವ್ಯವಸ್ಥೆ , ಆಸನಗಳ (ಚೇರುಗಳ) ಗುಣಮಟ್ಟವೂ ಸಹ ಹಾಗೂ ಜೊತೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್ ) .... ಇನ್ನೂ ಅನೇಕ ರೀತಿಯ ಸಮಸ್ಯೆಗಳು ಜನರನ್ನು ಇತ್ತೀಚಿಗೆ ಚಿತ್ರಮಂದಿರಗಳತ್ತ ಹೋಗುವುದೋ ಬೇಡವೋ ಎಂದು ಆಲೋಚಿಸುವಂತೆ ಮಾಡಿದೆ.. ಇದಕ್ಕೆಲ್ಲಾ ಬೇಗನೆ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಚಿತ್ರಮಂದಿರಗಳತ್ತ ಜನರನ್ನು ಕರೆತರುವುದು ತುಂಬಾ ಕಷ್ಟವಾಗಬಹುದು .. ಒಮ್ಮೆ ಎಲ್ಲರೂ ಇದರ ಬಗ್ಗೆ ಆಲೋಚಿಸಿ ಎಂದು ನಮ್ಮ ಅನಿಸಿಕೆ + ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇವೆ.. :)

ಎಲ್ಲರಿಗೂ ಒಳ್ಳೆಯದಾಗಲಿ .....
* ಓಂ ಶ್ರೀ ಗಣೇಶಾಯ ನಮಃ *

|| ಪ್ರಶಾಂತ್ ಖಟಾವಕರ್ ||

Saturday 9 June 2012

ಹೊಸ ಸಿನಿಮಾ + ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)


ಚಿತ್ರ ಇಷ್ಟ ಆಗದೆ ಇರುವುದಕ್ಕೆ ಕಾರಣ ಹೆಚ್ಚು ಹೆಚ್ಚು ಚಿತ್ರಗಳ ಬಿಡುಗಡೆ ಏಕಕಾಲಕ್ಕೆ ..


ರಸ್ತೆ ಕಾಮಗಾರಿ, ಅಲ್ಲಲ್ಲಿ ಪೈಪ್`ಲೈನ್ , ಕೇಬಲ್ ವರ್ಕ್ , ದೊಡ್ಡ ದೊಡ್ಡ ಊರುಗಳಲ್ಲಿ ಫ್ಲೈಓವರ್ ... ಹೀಗೆಲ್ಲಾ ಆಗಿ ಹೆಚ್ಚು ತೊಂದರೆ ಚಿತ್ರಮಂದಿರಗಳತ್ತ ಬರಲು .. 


ರಜಾ ದಿನಗಳಲ್ಲಿ ಸಂಬಂಧಿಕರು ಊರಿಗೆ ಬಂದಾಗ .. ಸಿನಿಮಾ ಎಲ್ಲಾ ಬೇಡ ನಮ್ಮೂರಲ್ಲಿ ನೋಡ್ತೀವಿ .. ಅದನ್ನು ಬಿಟ್ಟು ಬೇರೆ ಏನಾದರೂ ತೋರಿಸಿ (ದೇವಸ್ಥಾನ , ಹೋಟೆಲ್ , ಪಾರ್ಕ್ , ಹೊಸ ಶಾಪಿಂಗ್ ಕಾಂಪ್ಲೆಕ್ಸ್ , ಪ್ರೇಕ್ಷಣೀಯ ಸ್ಥಳಗಳು) ಅಂತಾ ಕೇಳ್ತಾರೆ .. 


ತಕ್ಷಣಕ್ಕೆ ಒಂದು ಚಿತ್ರದ ಬಗ್ಗೆ ಮೊಬೈಲ್ ಅಲ್ಲಿ ಮಾತುಕತೆ .. ನಂತರ  ಮನೆಯಲ್ಲಿ ನಮ್ಮ ಫ್ರೆಂಡ್ ಹೇಳಿದ ಆ ಸಿನಿಮಾ ಸೂಪರ್ ಇದೆ ಅಂತಾ ಒಬ್ಬರು , ಇದೇ ರೀತಿ ಮತ್ತೊಬ್ಬರು .. ಅಣ್ಣ ತಮ್ಮ ಅಕ್ಕ ತಂಗಿ ... ಹೀಗೆ ಕಿತ್ತಾಡಿ ಕೊನೆಯಲ್ಲಿ ಯಾವುದೋ ಒಂದು ಸಿನಿಮಾ ನೋಡೋಕ್ಕೆ ಅಷ್ಟೇ ಸಾಧ್ಯ ..  


ಈ ಎಲ್ಲದರ ನಡುವೆ ಹೊಸ ಸಿನಿಮಾ ಹೇಗಿದೆ ಅನ್ನುವ ಆಲೋಚನೆಯೇ ಇರುವುದಿಲ್ಲ .. 
ಪ್ರೇಕ್ಷಕ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಬುದ್ದಿವಂತ ಎನ್ನುವುದು ನಿಜ ಒಪ್ಪುತ್ತೇವೆ .. ಆದರೆ ಇನ್ನೂ ಒಂದು ಆಯಾಮದಲ್ಲಿ ಆಲೋಚನೆ ಮಾಡಿದಲ್ಲಿ ಪ್ರೇಕ್ಷಕ ತನ್ನ ಬುದ್ದಿಯನ್ನು ಹೊಸ ಚಿತ್ರಗಳ ಗುಣಮಟ್ಟ ಅಳೆಯಲು ಉಪಯೋಗಿಸುತ್ತಿಲ್ಲ ಅನ್ನುವುದೂ ಸಹ ನಿಜವೇ ಆಗಿದೆ..
ಹೀಗಿರುವಾಗ ಚಿತ್ರರಂಗದಲ್ಲಿ ಹೊಸ ಹೊಸ ರೀತಿಯಲ್ಲಿ , ಹತ್ತಾರು ದೃಷ್ಟಿಕೋನಗಳಲ್ಲಿ ಆಲೋಚಿಸಿ ಪ್ರಚಾರ ಕಾರ್ಯ ಮಾಡಬೇಕು .. ನಮ್ಮಿಂದ ಆಗುವಷ್ಟು ಪ್ರಚಾರದ , ಪ್ರೋತ್ಸಾಹದ  ಕಾರ್ಯವನ್ನು ನಾವಂತೂ ಹೊಸ ಹೊಸ ಪ್ರತಿಭೆಗಳಿಗೆ ಕೊಟ್ಟೆ ಕೊಡುತ್ತೇವೆ.. ಆ ಹೊಸತನ ನಮಗಿಷ್ಟವಾದಲ್ಲಿ ಖಂಡಿತ ಪ್ರೋತ್ಸಾಹ ಬೆಂಬಲಗಳಿಗೆ ಸಾಧ್ಯವಾದಷ್ಟೂ ಜನರನ್ನು ಸೇರಿಸುತ್ತೇವೆ .. ಹೊಸ ಹೊಸ  ರೀತಿಯ  ಪ್ರಚಾರ  ಹಾಗೂ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯ  ಮುಂದುವರಿಸಬೇಕು ಎನ್ನುವುದು ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)

Monday 28 May 2012

ವಿಶೇಷ ಬರಹಗಾರ


ವಿಶೇಷ  ಬರಹಗಾರ
********************

ತಾನಲ್ಲಿ ಬರೆಯುವ ಮೊದಲೇ ತಿಳಿದಿರಬೇಕು
ತಾನೇನು ವಿಷಯಗಳ ಅರಿತು ಬರೆಯಬೇಕು
ತನಗೋಸ್ಕರ ಬರೆಯುವ ಸ್ವಾರ್ಥವಿನ್ನು ಸಾಕು
ತನ್ನವರಿಗಾಗಿ ತಾ ಬರೆಯುವುದ ಕಲಿಯಬೇಕು

ತಾನೇನೆಂದು ತಿಳಿದು ಬರೆಯುವ ತಾಳ್ಮೆ ಬೇಕು
ತಾಳಿದವನು ಬಾಳಿಯಾನು ಎಂದು ತಿಳಿದಿರಬೇಕು
ತಳಕು ಬಳಕು ಸುಳ್ಳು ಸೇರಿಸುವುದ ಕೈ ಬಿಡಬೇಕು
ತಪ್ಪಿದರೆ ತಿದ್ದಿ ಬರೆಯುವ ಬುದ್ದಿಯ ಹೊಂದಿರಬೇಕು

ತಾತ್ಕಾಲಿಕ ಸತ್ಯವಾದರೂ ಹತ್ತಿರ ಸೆಳೆಯಬೇಕು
ತಾಯ್ನುಡಿಯ ತಾನೆಂದೆಂದೂ ಉಳಿಸಿ ಬೆಳೆಸಬೇಕು
ತಕ್ಷಣಕ್ಕೆ ತಿಳಿದದ್ದನ್ನು ಬರೆದರೂ ಅರ್ಥವಿರಬೇಕು
ತನ್ನಲ್ಲಿ ವಿಶೇಷ ಬರಹಗಾರ ಆಗುವ ಲಕ್ಷಣವಿರಬೇಕು

|| ಪ್ರಶಾಂತ್ ಖಟಾವಕರ್ ||

Thursday 24 May 2012

ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಪ್ರತಿಕ್ರಿಯೆ ಪಡೆ


 ಕೆಲವು ಸತ್ಯವನ್ನು ಹೇಳಲು ಇಚ್ಚಿಸುತ್ತೇವೆ.. ಅದೇನೆಂದರೆ ಈ ಅಂತರಜಾಲದ ಬ್ಲಾಗ್ ಲೋಕದಲ್ಲಿ ಈಗ ರಾಜಕೀಯ ಹೆಚ್ಚುತ್ತಿದೆ ಮತ್ತು ಜೊತೆಯಲ್ಲಿ ಜಾತಿಯ ಹೆಸರಲ್ಲಿ ಅಡೆತಡೆಗಳು ಕಂಡು ಬರುತ್ತಿವೆ.. ಹಾಗಾಗಿ ಸುಮ್ಮನೆ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅತ್ಯುತ್ತಮವಾದ ಕಾರ್ಯ .. ನಾವು ಓದಿದ್ದೇವೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಓದುವುದೇ ಕಷ್ಟವಾಗುತ್ತದೆ.. ಹಾಗು ಪ್ರತಿಕ್ರಿಯೆ ವಿಚಾರದಲ್ಲಿ ಇಲ್ಲಿ ವಿವರಿಸಿದಂತೆ ಎಲ್ಲಾ ಲೇಖಕರು ಪ್ರತಿಕ್ರಿಯೆ ಅಪೇಕ್ಷಿಸುವುದು ಸಹಜವಾದ ವಿಚಾರವೇ ಆಗಿದೆ.. ಆದರೆ ನಮ್ಮ ವಯಕ್ತಿಕ ಅಭಿಪ್ರಾಯ ನಾವು ಯಾವುದೇ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆ ಇಲ್ಲದೆಯೇ ಪ್ರಕಟಣೆ ಹಾಕುತ್ತೇವೆ .. ಆದರೆ ಮೆಚ್ಚುಗೆಯ ನುಡಿಗಳನ್ನು ತಿಳಿಸಿದವರಿಗೆ ಮಾತ್ರ ವಂದನೆಗಳನ್ನು ತಿಳಿಸುವುದನ್ನು ತಪ್ಪಿಸುವುದಿಲ್ಲ.. ಹಾಗು ಮತ್ತೊಬ್ಬರ ಪ್ರಕಟಣೆಗಳಿಗೆ ಉತ್ತರಿಸಲು ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ.. ಹೊಸ ಪ್ರತಿಭೆಗಳೇ ಇರಲಿ ಅಥವಾ ಅನುಭವ ಹೊಂದಿದ ಪ್ರಬುದ್ದ ಲೇಖಕರೇ ಆಗಿರಲಿ , ಯಾರೇ ಇದ್ದರೂ ನಮ್ಮ ಅನಿಸಿಕೆ ಅಭಿಪ್ರಾಯ ಅನುಮಾನಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸುವ ಮತ್ತು ಚರ್ಚಿಸುವಲ್ಲಿ ಯಾವ ರೀತಿಯ ಭಯವೂ ಇಲ್ಲ ಮತ್ತು ನಮಗೆಷ್ಟು ತಿಳಿದಿರುತ್ತದೆಯೋ ಅಷ್ಟನ್ನು ಬರೆಯುವುದರಲ್ಲಿ ಯಾವ ತಪ್ಪೂ ಸಹ ಇಲ್ಲ ಎಂದು ಭಾವಿಸುವವರು ನಾವು .. ಇನ್ನು ಇತ್ತೀಚಿಗೆ ಈ ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ನೀಡುವ ಮನಸ್ಸಿರುವ ನಮ್ಮಂತಹಾ ಓದುಗರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗುತ್ತಿಲ್ಲ .. :)
ಹಾಗು ಮತ್ತೊಂದು ವಿಚಾರ (ಇಂಗ್ಲೀಷ್ ಅಲ್ಲಿ "ಗಿವ್ ರೆಸ್ಪೆಕ್ಟ್ & ಟೆಕ್ ರೆಸ್ಪೆಕ್ಟ್") ಮರ್ಯಾದೆ ಕೊಟ್ಟು ಮರ್ಯಾದೆ ಪಡೆ ಎನ್ನುವಂತೆ ಇಲ್ಲಿ ಗುಂಪುಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಪ್ರತಿಕ್ರಿಯೆ ಪಡೆ ಎನ್ನುವಂತೆ ವಾತಾವರಣ ನಿರ್ಮಾಣಗೊಂಡಿದೆ .. ಇದಕ್ಕೆ ಸಾಕ್ಷಿ ಒಂದೆರಡು ತಿಂಗಳು ನಾವೇ ನಮ್ಮ ಮನಸ್ಸನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಕಂಡುಕೊಂಡ ಸತ್ಯ .. ಎಷ್ಟೋ ಲೇಖಕರ , ಸ್ನೇಹಿತರ ಕಥೆ ಕವಿತೆಗಳು ಇಷ್ಟವಾದರೂ ಸಹ ಯಾವುದೇ ಪ್ರತಿಕ್ರಿಯೆ ಕೊಡದೆಯೇ ಸುಮ್ಮನೆ ಇದ್ದದ್ದು.. ಹಾಗು ಈ ರೀತಿ ಮಾಡಿದ್ದು ಕೇವಲ ಒಂದು ಗುಂಪಿನಲ್ಲಿ ಮಾತ್ರವಲ್ಲ .. ನಾವು ನಿರ್ವಾಹಕರಾಗಿ ಇರುವ ಸುಮಾರು ಆರೇಳು ಗುಂಪುಗಳಲ್ಲೂ ಸಹ ಯಾವುದೇ ಪ್ರತಿಕ್ರಿಯೆಗಳನ್ನು ಕೊಟ್ಟಿಲ್ಲ .. ಆದರೆ ನಮ್ಮಲ್ಲಿ ವಯಕ್ತಿಕವಾಗಿ ಕೇಳಿಕೊಂಡು , ಪ್ರತಿಕ್ರಿಯೆಗಳನ್ನು ಅಪೇಕ್ಷಿಸಿದವರಿಗೆಲ್ಲಾ ಮನಸ್ಪೂರ್ವಕವಾಗಿ ಸ್ವಾಗತಿಸಿ ಮತ್ತು ಅವರ ಕಥೆ ಕವಿತೆಗಳನ್ನು ಬಿಡುವು ಮಾಡಿಕೊಂಡು ಸಂಪೂರ್ಣ ಓದಿ ಅನಿಸಿಕೆ ಅಭಿಪ್ರಾಯಗಳನ್ನು ನೀಡಿದ್ದೇವೆ .. ಹಾಗು ಕೊನೆಯದಾಗಿ ಹೇಳಬಯಸುವ ವಿಚಾರ ಒಬ್ಬ ಲೇಖಕ + ವಿಮರ್ಶಕನಿಗಿಲ್ಲಿ ಸತ್ಯವನ್ನು ಪ್ರಕಟಿಸುವ + ಪ್ರತಿಕ್ರಿಯಿಸುವ ಸ್ವಾತಂತ್ರ್ಯ ಸಿಗಬೇಕು .. ಅದನ್ನು ಪ್ರಕಟಣೆ ಕೊಡುವ ಬರಹಗಾರರು ಕೊಡಬೇಕು .. ಹಾಗು ಕೆಲವು ಸಮಯ ಸಂಧರ್ಭಗಳಲ್ಲಿ ಪ್ರಕಟಣೆಯ ಕುರಿತಾದ ವಿಚಾರದಲ್ಲಿ ಚರ್ಚೆಯನ್ನು ಮಾಡಿ ಅನುಮಾನ ಸಂಗತಿಗಳ ಬಗೆಹರಿಸುವಲ್ಲಿ ಸಹಕರಿಸಬೇಕು .. ಒಟ್ಟಿನಲ್ಲಿ ಒಂದೇ ಮಾತು ಈಗ ರಾಜಕೀಯ ಈ ಫೇಸ್ಬುಕ್ ಗುಂಪುಗಳಲ್ಲಿ ಹೆಚ್ಚುತ್ತಿದೆ ಹಾಗು ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎನ್ನುವ ನಿಯಮ ಭೇದಗಳು ಸಹ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ.. ಅದಕ್ಕೆ ಸುಮ್ಮನೆ ಕಥೆ ಕವಿತೆಗಳನ್ನು ಓದಿ (ಕೇಳಿದವರಿಗೆ ಮಾತ್ರ ಪ್ರತಿಕ್ರಿಯೆ ಕೊಟ್ಟು) ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುವುದರಲ್ಲಿ ಯಾವ ರೀತಿಯ ತಪ್ಪು ಅನಿಸುವುದೇ ಇಲ್ಲ ಎಂಬುದು ನಮ್ಮ ಅಭಿಪ್ರಾಯ .. ಹಾಗು ಕೆಲವು ರಹಸ್ಯಗಳನ್ನು ಇಲ್ಲಿ ಹೇಳಲಾಗುವುದಿಲ್ಲ .. ಇಷ್ಟ ಇದ್ದವರು ವಯಕ್ತಿಕವಾಗಿ ಸಂದೇಶಗಳ ಮೂಲಕ ತಿಳಿಯಬಹುದು .. ಎಲ್ಲರಿಗೂ ಸ್ವಾಗತ .. ಹಾಗು ಎಲ್ಲರಿಗೂ ಶುಭವಾಗಲಿ .. ಒಂದೆರಡು ತಿಂಗಳು ಪ್ರೋತ್ಸಾಹದ ಮಾತುಗಳನ್ನು ನಿಲ್ಲಿಸಿದ ನಾವು ಇನ್ನು ಒಂದು ವಾರದ (ಜೂನ್ ಒಂದು) ನಂತರವೇ ಎಲ್ಲಾ ಪ್ರಕಟಣೆಗಳಿಗೆ ಪ್ರತಿಕ್ರಿಯೆ ಹಾಕುತ್ತೇವೆ .. ಆದರೆ ವಯಕ್ತಿಕವಾಗಿ ಪ್ರತಿಕ್ರಿಯೆ ಅಪೇಕ್ಷಿಸುವ ಎಲ್ಲಾ ಸ್ನೇಹಿತರಿಗೂ ಸಹ ಮನಸ್ಪೂರ್ವಕವಾಗಿ ಓದಿ ಮೆಚ್ಚಿ ಪ್ರತಿಕ್ರಿಯೆ ಪ್ರೋತ್ಸಾಹದ ಮಾತುಗಳನ್ನು ತಿಳಿಸಲು ಯಾವುದೇ ರೀತಿಯ ತೊಂದರೆ ಇಲ್ಲ.. ಹಾಗು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು .. ಶುಭ ಮುಂಜಾನೆ .. :)

Friday 13 April 2012

ಇಂಗ್ಲೀಷ್ ಕನ್ನಡ


ಇಂಗ್ಲೀಷ್ ಕನ್ನಡ ನಾವು ಸುಲಭವಾಗಿ ಬಳಸುವ ವಿಧಾನ ಹೀಗೆದೆ ನೋಡಿ..

ದೊಡ್ಡ ಅಕ್ಷರಕ್ಕೆ ಇಂಗ್ಲೀಷ್ ಕ್ಯಾಪಿಟಲ್ ಅಕ್ಷರದ ಬಳಕೆ

ಸಣ್ಣ ಅಕ್ಷರಕ್ಕೆ ಸುಮ್ಮನೆ ಹಾಗೆಯೇ ಬರೆಯುವುದು ...

ಉದಾಹರಣೆ :

ನಾನು ನಿಮ್ಮ ಹಣ್ಣಿನ ಅಂಗಡಿಗೆ ಬಂದು ಅಳತೆ ಕೊಟ್ಟು ತುಂಬಾ ದಿನಗಳೇ ಆಗಿದೆ..

naanu nimma haNNina angaDige bandu aLate koTTu tumbaa dinagaLe aagide.. :)

ಈ ರೀತಿ ಅತೀ ಬೇಗನೆ ಸರಳ ಮತ್ತು ಸುಲಭವಾಗಿ ಬರೆಯುವ ಕ್ರಮವನ್ನು ಎಲ್ಲರೂ ಅನುಸರಿಸಬಹುದು.. ಇದು ಆದಷ್ಟು ಬೇಗನೆ ಟೈಪ್ ಮಾಡಲು ಸಾಧ್ಯವಾಗುತ್ತದೆ..

ಮೊಬೈಲ್ ಅಲ್ಲಿ ಬಳಸುವಾಗ ಮತ್ತು ಸಮಯದ ಅಭಾವ ಇದ್ದಾಗ ಇದನ್ನು ಬಳಸಲೇಬೇಕು.. ಆದರೆ ಹೆಚ್ಚಿನ ಸಮಯದಲ್ಲಿ ನಾವು ಕನ್ನಡವನ್ನೇ ಬಳಸುವುದು .. ಆದರೆ ಬೇರೆ ಬೇರೆ ಭಾಷೆಯವರು ಕನ್ನಡ ಮಾತನಾಡಲು ಬರುತ್ತೆ , ಅರ್ಥ ಆಗುತ್ತೆ .. ಓದಲು ಬರೆಯಲು ಬರುವುದಿಲ್ಲ.. ಅಂತಹವರು ನಮ್ಮ ಸ್ನೇಹಿತರು ತುಂಬಾ ಇದ್ದಾರೆ .. ಅವರಿಗಾಗಿ ಕೆಲವು ಸಾರಿ ಈ ರೀತಿಯಲ್ಲಿ ಇಂಗ್ಲೀಷ್  ಕನ್ನಡ  ಬರೆಯಲೇಬೇಕು .. :) :)

ಗುಂಪುಗಳು

ಗುಂಪುಗಳು ಅನ್ನೋದು ಈಗ ಒಬ್ಬೊಬ್ಬ ಗೆಳಯ/ಗೆಳತಿ ಮನೆಯಿದ್ದಂತೆ.. ನಾವು ಯಾವಾಗ ಸಮಯ ಸಿಗುತ್ತೋ ಆಗ ಎಲ್ಲರ ಮನೆಯ ಕಡೆಗೂ ಹೋಗಿ ಬರಬೇಕು.. ಮತ್ತು ಇಲ್ಲಿ ನಾವು ದಿನ ನಿತ್ಯ ಹೋಗಿ ಬರುವ ಗುಂಪುಗಳು ನಮ್ಮ ಹಿಂದೆ ಮುಂದೆ ಅಕ್ಕಪಕ್ಕದ ಮನೆಗಳು ಇದ್ದಂತೆ.. ಹಾಗು ಕೆಲವು ಗುಂಪುಗಳು ಎಲ್ಲವನ್ನು ಸಂಗ್ರಹಿಸುವ , ಕಾಯ್ದಿರಿಸುವ ಗೋಡೌನ್ ಇದ್ದಂತೆ .. ನಾವು ಎಲ್ಲವನ್ನು ಆಗಾಗ ನೋಡಿಕೊಳ್ಳುತ್ತಲೇ ಇರಬೇಕು.. ಯಾವ ಸಮಯದಲ್ಲಿ ಯಾವ ಗುಂಪಿನಲ್ಲಿ ವಿಶೇಷ ವಿಸ್ಮಯ ವಿಷಯಗಳು ಸಿಗುತ್ತದೆ ಎಂಬುದು ಇಲ್ಲಿ ಮುಖ್ಯ ಆಲೋಚನೆ ಆದ ಕಾರಣ ಅನವಶ್ಯಕ ಹೆಚ್ಚು ಗುಂಪುಗಳು ಆದವು ಎಂದು ಚಿಂತೆ ಮಾಡದೆಯೇ ಸುಮ್ಮನೆ ಗುಂಪಿನ ನೋಟಿಫಿಕೇಶನ್ ಆಫ್ ಮಾಡಿ ಇದ್ದು ಬಿಡಬೇಕು .. ಹಾಗು ಕೆಲವು ಉಪಯುಕ್ತ ಮತ್ತು ಅತೀ ಮುಖ್ಯವಾದ ಸ್ನೇಹಿತರ ಹೆಸರನ್ನು ಒಂದು ವಿಶೇಷ ಪಟ್ಟಿ ಮಾಡಿ ಇಡಬೇಕು .. ಆಗ ಆ ಸ್ನೇಹಿತ/ಸ್ನೇಹಿತೆ ಏನಾದರೂ ಬರೆದರೆ , ಫೋಟೋ ಹಾಕಿದರೆ ತಕ್ಷಣಕ್ಕೆ ತಿಳಿಯುತ್ತದೆ.. ಇದರಿಂದ ಉತ್ತಮ ಸ್ನೇಹ ಬೆಳೆಸುವ ಅವಕಾಶ ಹೆಚ್ಚು ಮತ್ತು ಅತ್ಯುತ್ತಮ ವಿಚಾರಗಳು ಓದಲು ಸಿಗುತ್ತದೆ.. ಒಮ್ಮೆ ವಿಚಾರಗಳನ್ನು ಚಿಂತಿಸುವ ತಾಳ್ಮೆ ಇರಬೇಕು.. ಹಾಗು ಒಂದೇ ವಿಚಾರವನ್ನು ಹತ್ತು ಹಲವಾರು , ಪರ ಮತ್ತು ವಿರೋಧ ಭಾವನೆಗಳಲ್ಲೂ ಸಹ ಚಿಂತಿಸಿ , ಆದಷ್ಟು ಎಲ್ಲರಿಗೂ ಹಿತವಾಗುವ ರೀತಿಯಲ್ಲಿ ಒಂದು ನಿರ್ಧಾರವನ್ನು ಆರಿಸಿಕೊಳ್ಳಬೇಕು .. ಹಾಗು ಒಬ್ಬ ವ್ಯಕ್ತಿ ಬಳಸುವ ಪದಗಳ ಬಗ್ಗೆ ಬಹುವಾಗಿ ಆಲೋಚಿಸುವ ಮೊದಲು ವಿಷಯವನ್ನು ಆಲೋಚಿಸಬೇಕು .. ನಂತರ ಪದ ಬಳಕೆಯ ಕ್ರಮವನ್ನು ಮತ್ತು ಬರೆದ ಸಮಯ ಹಾಗು ಪರಿಸ್ಥಿತಿ ಎಲ್ಲವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು .. ಇದರಿಂದ ಬರುವ ಜ್ಞಾನದ ಪ್ರಮಾಣವನ್ನು ಗ್ರಹಿಸಿ ಲಾಭ ನಷ್ಟ ಚಿಂತನೆ ಹಾಗು ಉದ್ದೇಶಗಳನ್ನು ವಿವರಣೆ ಪಡೆಯಬೇಕು .. ಮುಂದಿನ ವಿಚಾರ ಮಾತುಗಳು ಆಗ ಸುಲಭ ಮತ್ತು ಸರಳವಾಗುವುದು.. :)

Wednesday 8 February 2012

ಚಿತ್ರ ನೋಡಿ ಕವನ ಬರೆಯಿರಿ ==>> ಫೆಸ್`ಬುಕ್ ಲಿಂಕ್

ಚಿತ್ರ ನೋಡಿ ಕವನ ಬರೆಯಿರಿ - 1



ನಮಗಿರೆಂಬೆಯೇ ಹಾಸಿಗೆಯಾಗಿಹುದು
ನಮ್ಮತ್ತ ಸುಳಿಯದಿಹುದು ಚಿಂತೆಯೆಂಬ ಭಾವ 
ನಿದ್ದೆಯೆಂಬ ಭಾವ ಆವರಿಸಿಹುದು ನಮ್ಮನ್ನು 
ನಮಗಳ ಶಾಖವೇ ಹೊದಿಕೆಯಾಗಿಹುದು 
ನಾವೇ ಸುಖಿಗಳಾಗಿಹು... 
ನಮ್ಮ ಸುಖ ನಿಮಗಿಲ್ಲದಿಹುದು...!!!! 

December 29, 2011 at 10:14pm 
************************************************


ನಾವೆಲ್ಲಾ ಒಂದೇ ಬಳಗ 
ಮಾಡೆವು ನಾವೆಂದು ಕಾಳಗ 
ಒಗ್ಗಟ್ಟೇ ನಮ್ಮ ಬಲ 
ಎದುರಿಸುವೆವು ಈ ಚಳಿಗಾಲ ... 

December 29, 2011 at 11:03pm 
************************************************


ಮುಖ ಯಾಕೆ ತಿರುಗಿಸಿಕೊಂಡು ಮಲಗಿದ್ದೀರಾ ಸುಂದರಿಯರೇ...?
ನಿಮ್ಮ ಸೌಂದರ್ಯಕ್ಕೆ ಮರುಳಾಗಿ ಯಾರಾದರೂ ಕೊಂಡೊಯ್ದರೇ?? ಅನ್ನೊ ನಾಚಿಕೆಯೆ..? 

December 29, 2011 at 11:24pm 
************************************************


ನೂರಾದರೇನು ನಮ್ಮ ಬಣ್ಣ 
ನಾವೆಂದು ಒಂದೇ ಅಣ್ಣ... 
ನಮ್ಮಂತೆ ನೀವಿರಲೆಂಬ 
ನಮ್ಮ ಬಯಕೆಗೆ ನೀರೆರೆಯಿರಣ್ಣ..:))) 

December 30, 2011 at 6:53am 
************************************************


ಒಬ್ಬರನ್ನೊಬ್ಬರ ತಬ್ಬಿಕೊಳ್ಳಲಾಗದ ವ್ಯಥೆಯ ಮರೆತು
ಸಹೋದರತೆಯ ಮೆರೆದಿರಾ, ತಾಗಿಕೊಂಡು ಕುಳಿತು 

ನೋಡಿ ಕಲಿಯೋ ಮನುಜ ಇವುಗಳೊಳಗಿನ ಅನ್ಯೋನ್ಯತೆಯ 
ಕತ್ತರಿಸಿ ಹಾಕಿರೋ ನಿಮ್ಮ ನಿಮ್ಮೊಳಗಿನ ವೈಷಮ್ಯತೆಯ 

December 30, 2011 at 8:30am 
************************************************


""ನಾವು ಬಣ್ಣದ ಹಕ್ಕಿ,
ಹೆದರಿಸಬೇಡಿ ನಮ್ಮನ್ನು ಕುಕ್ಕಿ, 
ನಮ್ಮಿಂದ ಒಳ್ಳೇದನ್ನು ಹೆಕ್ಕಿ, 
ತಿಂದು ತೇಗಬೇಡಿ ನಮ್ಮ ಮುಕ್ಕಿ."" 

December 30, 2011 at 12:55pm 
************************************************


.. "ಗೂಡಿಲ್ಲದ ಕಾಯಗಳು" 

ಅಲ್ಲಿತ್ತು ನಮ್ಮೂರು
ಸುತ್ತಲೂ ಹಚ್ಚ ಹಸಿರು
ಬಂಧು ಬಳಗ ಸಾವಿರಾರು
ನಮಗೆಂದೇ ಪಕ್ಷಿಧಾಮ 
ಹಸಿರ ನಡುವಲ್ಲಿ ನಮ್ಮ ಪ್ರೇಮ 

ಬಂದು ಇಲ್ಲೀಗ.. ಬದಲಾವಣೆ ಎಂದು 
ಮಾಡಿರುವರು ಎಲ್ಲ ಹಸಿರ ನಿರ್ನಾಮ 
ಮುದ್ದಿನ ಗೂಡುಗಳೆಲ್ಲಾ ಎಲ್ಲೋ ಮಾಯ 
ಈಗ ಅಲೆಮಾರಿ ಜೀವನ ನಮ್ಮ ಕಾರ್ಯ 
       ಮನಸ್ಸಿನ ಒಳಗೀಗ ಆಗಿದೆ ಆರದ ಗಾಯ .. :) 

|| ಪ್ರಶಾಂತ್ ಖಟಾವಕರ್ || 

December 30, 2011 at 7:36pm 
************************************************


‎:ನಾನೂ ಬರೆದೆನೊಂದು:
ನಾನೂ ಬರೆದೆಯೊಂದ ಕವಿತೆ 
ಪದಗಳ ಹುಡುಗಿ ಕವಿತೆಯಂದ್ರೇ ವ್ಹಾ... ಕವಿತೆ 
ಅದ ಕೇಳಿ ತಲೆದೂಗಿ 
ಮಲಗಿದವು ಮೈಮರೆತು ಹಾಯಾಗಿ 

December 30, 2011 at 10:44pm 
************************************************


ಓ ಮರಿಹಕ್ಕಿಗಳೇ ಭಾಗ್ಯವೆಂದರೇ ನಿಮ್ಮದೆ.

ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿಮ್ಮದೆ. 

ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿಮ್ಮದೆ. 

-ನಂದೀಶ್ ಬಂಕೇನಹಳ್ಳಿ 

January 4 at 12:18pm 
************************************************


ನಮಗಿಲ್ಲಾ ಭವ್ಯ ಭಂಗಲೆ-ಮಹಲುಗಳ ಹಂಗು 
ನಮಗಿಲ್ಲಾ ಕನಸುಗಳೆಂಬ ಭವ್ಯ-ಬೃಂಗಗಳ ಗುಂಗು | 

ನಮಗಿಲ್ಲಾ ಊರು-ಕೇರಿ ಉದ್ದರಿಸುವ ಉದ್ದುದ್ದ ಭಾಷಣದ ಪುಂಗಿ 
ನಮಗಿಲ್ಲಾ ದುರಾಶೆ-ದುಂದುವೆಚ್ಚದ ಅಂದಾಭಿಮಾನದ ನಡೆಯ ಡೋಂಗಿ | 

ನಮಗಿಲ್ಲಾ ಜಗದಂಕೆಯನ್ನು ಸಾಧಿಸಬೇಕೆಂಬ ಇನ್ನಿಲ್ಲದ ಆಕಾಂಕ್ಷೆ 
ನಮಗಿಲ್ಲಾ ಜಗದೇಳಿಗೆ ನಮ್ಮಿಂದಲೇ ಆಗಲೆಂಬ ಮಹತ್ವಾಕಾಂಕ್ಷೆ | 

ನಮಗಿಲ್ಲಾ ಹಿರಿ-ಕಿರಿದೆಂಬ ಬೇಧ-ಭಾವಂಗಳು 
ನಮಗಿಲ್ಲಾ ಬಣ್ಣದ ಬಾನಾಡಿಗಳೆಂಬ ಕನವರಿಕೆಯ ಭಂಗಿಗಳು | 

ನಮಗೆಲ್ಲಾ ಅಗೋಚರ ಶಕ್ತಿಯ ಸೃಷ್ಟಿಯೇ ವಾತಾಯನ 
ನಮಗೆಲ್ಲಾ ನಮ್ಮೆಲ್ಲರ ಸಮೂಹವೇ ಬೆಚ್ಚಗಿನ ರಕ್ಷಾಯನ | 

January 4 at 12:25pm 
************************************************


ಬಾಯಾರಿಸಿ ದಣಿವಾರಿಸಿಕೊ ನಿಲ್ಲದಿರಲಿ ಪಯಣ 
ರೆಕ್ಕೆ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ 

January 5 at 1:41pm 
************************************************


ಅಮ್ಮನಿಲ್ಲದ ಗುಬ್ಬಿಯಿಂಡು 
ನೋವಿನ ಅನ್ನವುಂಡು 
ವಾತ್ಸಲ್ಯದ ಹಪಹಪಿಕೆಗೆ
ಪ್ರೀತಿಯ ಗುಟುಕಿಗೆ
ಕಾದು ಕುಳಿತಿರೆ
ಅಮ್ಮನಿಲ್ಲ 
ತುತ್ತಿನ ಸವಿಯುಣಿಸಲು 
ಎರವಲಾಗಿ ಕೊಡುವಿರ 
ಯಾರಾದರು ಮಾತೃ ಪ್ರೇಮವ! 

- ಕನ್ನಡ ಶ್ರೀಗಂಧ. 

January 7 at 3:36pm 
************************************************


ಓ ಮನುಜರೇ....!
ನಮಗಿಲ್ಲ ನಿಮ್ಮಂತೆ ಮಹಲಿನ ಬಯಕೆ.. 
ಬಂಗಲೆಯಲೂ ಏಕಾಂಗಿಗಳು.. ನಿಮ್ಮಂತೆ ನಾವಲ್ಲ. 
ಕೂಡಿ ಬಾಳುವುದಾ..ಹಂಚಿ ತಿನ್ನುವುದಾ.. 
ನೋಡಿ ಕಲಿಯಿರೋ ನಮ್ಮಿಂದ...:) 

February 2 at 3:04pm 
************************************************


ಒಂದೇ ಗೂಡಲ್ಲಿ 
ನಾವು ಒಂದುಗೂಡಿಹೆವು 
ಒಂದೇ ಬಳ್ಳಿಯ ಹೂಗಳಂತೆ 

ಒಂದೇ ಬಳ್ಳಿಯಲಿ 
ಕುಳಿತಿಹೆವು ನಾವು 
       ಒಂದೇ ತಾಯಿಯ ಮಕ್ಕಳಂತೆ ..... 

February 2 at 3:44pm
************************************************


Sunday 5 February 2012

ಚಿತ್ರಗಳ ಕವನ .. :)

                        ಈ ಚಿತ್ರಗಳ ಕವನ ಅಂದರೆ ನೆನಪುಗಳ ಪುಸ್ತಕ.. ಇಲ್ಲಿ ಕವನ ಬರೆದವರ ನೆನಪು ನಮ್ಮಲ್ಲಿ ಸದಾ ಇರಲು ಅವೆಲ್ಲವನ್ನು ನಮ್ಮ ಬ್ಲಾಗ್ ಅಲ್ಲಿ ಹಾಕುತ್ತೇವೆ.. ಸುಮ್ಮನೆ ಎಲ್ಲೋ ಹೇಗೋ ಪರಿಚಯ ಆಗಿ .. ಹಾಯ್ ಬಾಯ್ .. ಅಷ್ಟಕ್ಕೇ ನಿಲ್ಲದೇ.. ಒಂದು ಉತ್ತಮವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುವ ಸ್ನೇಹ ಸಂಬಂಧವನ್ನು ಮರೆಯದಂತೆ ಗಟ್ಟಿಗೊಳಿಸುವ ಪ್ರಯತ್ನವಷ್ಟೇ ಈ ಚಿತ್ರಗಳ ಕವನ.. ಇದು ಯಶಸ್ವಿ ಆದಲ್ಲಿ .. ಎಲ್ಲರೂ ಸಹ ಉತ್ತಮ ಸ್ನೇಹ ಭಾವನೆಯಿಂದ ಮನದಾಳದ ಮಾತುಗಳನ್ನು ಹಂಚಿಕೊಂಡು ಜೀವನದಲ್ಲಿ ಏನಾದರೂ ಸಾಧಿಸುವ ಛಲ ಬಲಗಳಿಗೆ ಕಾರಣವಾಗಿ.. ನಮ್ಮ ಎಲ್ಲರ ಸಾಮಾಜಿಕ  ಜೀವನ ಶೈಲಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎನ್ನುವ ಒಂದು ನಂಬಿಕೆ ಮಾತ್ರ.. ಹಾಗು ಬರೆಯುವ ಮತ್ತು ಓದುವ ಆಸಕ್ತಿ ಹೆಚ್ಚಾಗಿ.. ಅನೇಕ  ಯುವ ಪ್ರತಿಭೆಗಳ ಭಾವನೆಗಳ ಬರಹಕ್ಕೆ ಅದು ಒಂದು ಮೆಟ್ಟಿಲು ಇದ್ದಂತೆ.. ಹಂತ ಹಂತವಾಗಿ ಬೆಳೆಯುತ್ತಾ ಬಂದಂತೆಲ್ಲ.. ಒಂದಲ್ಲಾ  ಒಂದು ದಿನ ಸಾಕಷ್ಟು ಕನ್ನಡ ಕವಿಗಳು , ಕಥೆಗಾರರು ಹುಟ್ಟಿಕೊಂಡು ನಮ್ಮ ಕನ್ನಡ ಅತಿಯಾಗಿ ಬೆಳೆಯುತ್ತದೆ .. ಉಳಿಯುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಮಾತುಕತೆಗಳು ನಡೆಯುವಲ್ಲಿ ಒಂದು ಅದ್ಭುತ ಪರಿಣಾಮಕಾರಿ ಮಾರ್ಗವಾಗಿ ನಮ್ಮ ಮುಂದೆ ಪ್ರಕಟವಾಗುತ್ತದೆ.. ಇಲ್ಲಿ ಸಮಯ ಸಿಕ್ಕಾಗೆಲ್ಲ ನಮ್ಮ ಸ್ವಂತ ಚಿತ್ರಗಳ ಮೂಲಕ ಒಂದು ವಿಷಯವನ್ನು ಅದರಲ್ಲಿ ಚಿತ್ರಿಸಿ.. ಅದಕ್ಕೆ ಶೀರ್ಷಿಕೆ ಕೊಟ್ಟು ಬರೆಯಲು ಹೇಳುತ್ತೇವೆ.. ಬರೆದವರ ಭಾವನೆಗಳ ಆರ್ಥವು ಎಲ್ಲರಿಗೂ ತಿಳಿಯುತ್ತದೆ.. ಆಗ ಯಾರು ಯಾವ ದೃಷ್ಟಿಕೋನದಲ್ಲಿ ಈ ಚಿತ್ರವನ್ನು ಗಮನಿಸುತ್ತಾರೆ.. ಮತ್ತು ಅದರ ಹಿನ್ನೆಲೆ ಏನು .. ಪದಗಳ ರಚನೆಯಲ್ಲಿ ಬರುವ ಭಾವದ ಮುಖ್ಯ ಉದ್ದೇಶ .. ಆ ಕವಿಯು ಹೇಳಬಯಸುವ ಒಂದು ಸಣ್ಣ ಸಂದೇಶ .. ಸಾಲುಗಳಲ್ಲಿ ಅಡಗಿದ ಒಳಾರ್ಥಗಳು .. ಅದರಿಂದ ಓದುಗನ ಜೀವನ ಶೈಲಿಯಲ್ಲಿ .. ಈ ಸಮಾಜದ ಕುರಿತು ಆಲೋಚಿಸುವ ಮುಕ್ತವಾದ ಮನಸ್ಸು.. ಎಲ್ಲೋ ಅಡಗಿ ಕೂತಿರುವ ನೈಜ ಲೇಖಕನ ಬರಹ ಶಕ್ತಿ ಎಲ್ಲವೂ ಇಲ್ಲಿ ಗೋಚರಿಸುತ್ತದೆ.. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುತ್ತಾರೆ.. ಬರೆಯುವುದು ಇನ್ನೂ ಇದೆ.. ಆದರೆ ಈಗಲೇ ಎಲ್ಲವೂ ಬೇಡ .. ಮುಂದೆ ಮುಂದೆ ಬರೆಯುತ್ತಾ ಮತ್ತು ಚಿತ್ರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಇರುತ್ತೇವೆ.. ಈ ಒಂದು ಉತ್ತಮ ಕಾರ್ಯಕ್ಕೆ ನಿಮ್ಮೆಲರ ಮುಕ್ತ ಮನಸ್ಸಿನ ಸಹಕಾರದ ಅಗತ್ಯವಿದೆ.. ನಾವು ನಮ್ಮವರು ಎಂದುಕೊಂಡು ಮುನ್ನಡೆಯೋಣ.. ದುಷ್ಪರಿಣಾಮಗಳ ಚಿಂತೆ ಮಾಡಲು ಇದು ಯುದ್ಧವಲ್ಲ.. ಭಾವನೆಗಳ ಹಂಚಿಕೊಳ್ಳುತ್ತ .. ಭಾಂದವ್ಯ ಬೆಸೆಯುತ್ತ.. ಸುಂದರ ಬದುಕನ್ನು ಕಟ್ಟುತ್ತಾ.. ಸ್ನೇಹ ನಂಬಿಕೆ ವಿಶ್ವಾಸಗಳ ಒಂದು ಬೆಸುಗೆ ಹಾಕುವ ವಸ್ತುವಾಗಿ.. ಒಂದು ಸದೃಡವಾದ ಮಾನವ ಶಕ್ತಿಯ ಸೈನ್ಯವನ್ನೇ ನಿರ್ಮಿಸುವಲ್ಲಿ ಮಹತ್ತರವಾದ ಕಾರಣವಾಗಿ ಈ ಚಿತ್ರಗಳ ಕವನ ಮೂಡಿಬರಬಹುದೆಂಬ ಒಂದು ಚಿಂತನೆ ನಮ್ಮದು.. ನಮ್ಮಂತೆಯೇ ಇಲ್ಲಿ ನಮ್ಮ ಸ್ನೇಹಿತರಾದ ಶ್ರೀ ಮಂಜುನಾಥ್ ರೆಡ್ಡಿ ಅವರು ಸಹ ಚಿತ್ರಗಳ ಕವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.. ಅವರು ಕೊಡುವ ಚಿತ್ರಗಳು ಸಹ ಏನಾದರೂ ಒಂದು ರೀತಿಯ ಉತ್ತಮ ಸಂದೇಶವನ್ನು ಒಳಗೊಂಡಿರುತ್ತದೆ.. ಅಲ್ಲೂ ಸಹ ಅನೇಕ ಆಸಕ್ತರು ಅವರವರ ಭಾವನೆಗಳನ್ನು ಬರೆದಿರುತ್ತಾರೆ.. ಅವೆಲ್ಲವನ್ನು ಸೇರಿಸಿ ಒಂದು ಬ್ಲಾಗ್ ಮಾಡಿ.. ಕವನ ಸಂಗ್ರಹ ಮಾಡುವ ಬಯಕೆ ಇದೆ..  ಇನ್ನು ಮುಂದೆ ಚಿತ್ರಗಳಿಗೆ ಕವನ ಬರೆಯುವ ಎಲ್ಲಾ ಕವಿಗಳ ಹೆಸರು ಸಹಿತ .. ಅವರ ಎಲ್ಲಾ ಕವನಗಳನ್ನು ಈ ವಿಶೇಷ ಬರಹಗಾರ ಬ್ಲಾಗ್ ಅಲ್ಲಿ ಹಾಕುತ್ತೇವೆ..   ಈ ಒಂದು ಹೊಸ ಹವ್ಯಾಸವನ್ನು ರೂಡಿಸಿಕೊಳ್ಳುವ ಆಲೋಚನೆ ಇದೆ.. ಇದಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ವಿಚಾರ ವಿವರಣೆಯ ಸಹಿತ ಸ್ಪಷ್ಟವಾಗಿ ಬರೆದು ತಿಳಿಸಿ..  ಮನದಾಳದ ಮಾತುಗಳನ್ನು ಹಂಚಿಕೊಳ್ಳವ ಅವಕಾಶ ಕಲ್ಪಿಸಿದ್ದಕ್ಕೆ .. ಮನಸ್ಪೂರ್ವಕ ಧನ್ಯವಾದಗಳು.. :)

|| ಪ್ರಶಾಂತ್ ಖಟಾವಕರ್ ||