Sunday, 5 February 2012

ಚಿತ್ರಗಳ ಕವನ .. :)

                        ಈ ಚಿತ್ರಗಳ ಕವನ ಅಂದರೆ ನೆನಪುಗಳ ಪುಸ್ತಕ.. ಇಲ್ಲಿ ಕವನ ಬರೆದವರ ನೆನಪು ನಮ್ಮಲ್ಲಿ ಸದಾ ಇರಲು ಅವೆಲ್ಲವನ್ನು ನಮ್ಮ ಬ್ಲಾಗ್ ಅಲ್ಲಿ ಹಾಕುತ್ತೇವೆ.. ಸುಮ್ಮನೆ ಎಲ್ಲೋ ಹೇಗೋ ಪರಿಚಯ ಆಗಿ .. ಹಾಯ್ ಬಾಯ್ .. ಅಷ್ಟಕ್ಕೇ ನಿಲ್ಲದೇ.. ಒಂದು ಉತ್ತಮವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುವ ಸ್ನೇಹ ಸಂಬಂಧವನ್ನು ಮರೆಯದಂತೆ ಗಟ್ಟಿಗೊಳಿಸುವ ಪ್ರಯತ್ನವಷ್ಟೇ ಈ ಚಿತ್ರಗಳ ಕವನ.. ಇದು ಯಶಸ್ವಿ ಆದಲ್ಲಿ .. ಎಲ್ಲರೂ ಸಹ ಉತ್ತಮ ಸ್ನೇಹ ಭಾವನೆಯಿಂದ ಮನದಾಳದ ಮಾತುಗಳನ್ನು ಹಂಚಿಕೊಂಡು ಜೀವನದಲ್ಲಿ ಏನಾದರೂ ಸಾಧಿಸುವ ಛಲ ಬಲಗಳಿಗೆ ಕಾರಣವಾಗಿ.. ನಮ್ಮ ಎಲ್ಲರ ಸಾಮಾಜಿಕ  ಜೀವನ ಶೈಲಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎನ್ನುವ ಒಂದು ನಂಬಿಕೆ ಮಾತ್ರ.. ಹಾಗು ಬರೆಯುವ ಮತ್ತು ಓದುವ ಆಸಕ್ತಿ ಹೆಚ್ಚಾಗಿ.. ಅನೇಕ  ಯುವ ಪ್ರತಿಭೆಗಳ ಭಾವನೆಗಳ ಬರಹಕ್ಕೆ ಅದು ಒಂದು ಮೆಟ್ಟಿಲು ಇದ್ದಂತೆ.. ಹಂತ ಹಂತವಾಗಿ ಬೆಳೆಯುತ್ತಾ ಬಂದಂತೆಲ್ಲ.. ಒಂದಲ್ಲಾ  ಒಂದು ದಿನ ಸಾಕಷ್ಟು ಕನ್ನಡ ಕವಿಗಳು , ಕಥೆಗಾರರು ಹುಟ್ಟಿಕೊಂಡು ನಮ್ಮ ಕನ್ನಡ ಅತಿಯಾಗಿ ಬೆಳೆಯುತ್ತದೆ .. ಉಳಿಯುತ್ತದೆ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕನ್ನಡದಲ್ಲಿ ಮಾತುಕತೆಗಳು ನಡೆಯುವಲ್ಲಿ ಒಂದು ಅದ್ಭುತ ಪರಿಣಾಮಕಾರಿ ಮಾರ್ಗವಾಗಿ ನಮ್ಮ ಮುಂದೆ ಪ್ರಕಟವಾಗುತ್ತದೆ.. ಇಲ್ಲಿ ಸಮಯ ಸಿಕ್ಕಾಗೆಲ್ಲ ನಮ್ಮ ಸ್ವಂತ ಚಿತ್ರಗಳ ಮೂಲಕ ಒಂದು ವಿಷಯವನ್ನು ಅದರಲ್ಲಿ ಚಿತ್ರಿಸಿ.. ಅದಕ್ಕೆ ಶೀರ್ಷಿಕೆ ಕೊಟ್ಟು ಬರೆಯಲು ಹೇಳುತ್ತೇವೆ.. ಬರೆದವರ ಭಾವನೆಗಳ ಆರ್ಥವು ಎಲ್ಲರಿಗೂ ತಿಳಿಯುತ್ತದೆ.. ಆಗ ಯಾರು ಯಾವ ದೃಷ್ಟಿಕೋನದಲ್ಲಿ ಈ ಚಿತ್ರವನ್ನು ಗಮನಿಸುತ್ತಾರೆ.. ಮತ್ತು ಅದರ ಹಿನ್ನೆಲೆ ಏನು .. ಪದಗಳ ರಚನೆಯಲ್ಲಿ ಬರುವ ಭಾವದ ಮುಖ್ಯ ಉದ್ದೇಶ .. ಆ ಕವಿಯು ಹೇಳಬಯಸುವ ಒಂದು ಸಣ್ಣ ಸಂದೇಶ .. ಸಾಲುಗಳಲ್ಲಿ ಅಡಗಿದ ಒಳಾರ್ಥಗಳು .. ಅದರಿಂದ ಓದುಗನ ಜೀವನ ಶೈಲಿಯಲ್ಲಿ .. ಈ ಸಮಾಜದ ಕುರಿತು ಆಲೋಚಿಸುವ ಮುಕ್ತವಾದ ಮನಸ್ಸು.. ಎಲ್ಲೋ ಅಡಗಿ ಕೂತಿರುವ ನೈಜ ಲೇಖಕನ ಬರಹ ಶಕ್ತಿ ಎಲ್ಲವೂ ಇಲ್ಲಿ ಗೋಚರಿಸುತ್ತದೆ.. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುತ್ತಾರೆ.. ಬರೆಯುವುದು ಇನ್ನೂ ಇದೆ.. ಆದರೆ ಈಗಲೇ ಎಲ್ಲವೂ ಬೇಡ .. ಮುಂದೆ ಮುಂದೆ ಬರೆಯುತ್ತಾ ಮತ್ತು ಚಿತ್ರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಇರುತ್ತೇವೆ.. ಈ ಒಂದು ಉತ್ತಮ ಕಾರ್ಯಕ್ಕೆ ನಿಮ್ಮೆಲರ ಮುಕ್ತ ಮನಸ್ಸಿನ ಸಹಕಾರದ ಅಗತ್ಯವಿದೆ.. ನಾವು ನಮ್ಮವರು ಎಂದುಕೊಂಡು ಮುನ್ನಡೆಯೋಣ.. ದುಷ್ಪರಿಣಾಮಗಳ ಚಿಂತೆ ಮಾಡಲು ಇದು ಯುದ್ಧವಲ್ಲ.. ಭಾವನೆಗಳ ಹಂಚಿಕೊಳ್ಳುತ್ತ .. ಭಾಂದವ್ಯ ಬೆಸೆಯುತ್ತ.. ಸುಂದರ ಬದುಕನ್ನು ಕಟ್ಟುತ್ತಾ.. ಸ್ನೇಹ ನಂಬಿಕೆ ವಿಶ್ವಾಸಗಳ ಒಂದು ಬೆಸುಗೆ ಹಾಕುವ ವಸ್ತುವಾಗಿ.. ಒಂದು ಸದೃಡವಾದ ಮಾನವ ಶಕ್ತಿಯ ಸೈನ್ಯವನ್ನೇ ನಿರ್ಮಿಸುವಲ್ಲಿ ಮಹತ್ತರವಾದ ಕಾರಣವಾಗಿ ಈ ಚಿತ್ರಗಳ ಕವನ ಮೂಡಿಬರಬಹುದೆಂಬ ಒಂದು ಚಿಂತನೆ ನಮ್ಮದು.. ನಮ್ಮಂತೆಯೇ ಇಲ್ಲಿ ನಮ್ಮ ಸ್ನೇಹಿತರಾದ ಶ್ರೀ ಮಂಜುನಾಥ್ ರೆಡ್ಡಿ ಅವರು ಸಹ ಚಿತ್ರಗಳ ಕವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.. ಅವರು ಕೊಡುವ ಚಿತ್ರಗಳು ಸಹ ಏನಾದರೂ ಒಂದು ರೀತಿಯ ಉತ್ತಮ ಸಂದೇಶವನ್ನು ಒಳಗೊಂಡಿರುತ್ತದೆ.. ಅಲ್ಲೂ ಸಹ ಅನೇಕ ಆಸಕ್ತರು ಅವರವರ ಭಾವನೆಗಳನ್ನು ಬರೆದಿರುತ್ತಾರೆ.. ಅವೆಲ್ಲವನ್ನು ಸೇರಿಸಿ ಒಂದು ಬ್ಲಾಗ್ ಮಾಡಿ.. ಕವನ ಸಂಗ್ರಹ ಮಾಡುವ ಬಯಕೆ ಇದೆ..  ಇನ್ನು ಮುಂದೆ ಚಿತ್ರಗಳಿಗೆ ಕವನ ಬರೆಯುವ ಎಲ್ಲಾ ಕವಿಗಳ ಹೆಸರು ಸಹಿತ .. ಅವರ ಎಲ್ಲಾ ಕವನಗಳನ್ನು ಈ ವಿಶೇಷ ಬರಹಗಾರ ಬ್ಲಾಗ್ ಅಲ್ಲಿ ಹಾಕುತ್ತೇವೆ..   ಈ ಒಂದು ಹೊಸ ಹವ್ಯಾಸವನ್ನು ರೂಡಿಸಿಕೊಳ್ಳುವ ಆಲೋಚನೆ ಇದೆ.. ಇದಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಎಂಬುದನ್ನು ವಿಚಾರ ವಿವರಣೆಯ ಸಹಿತ ಸ್ಪಷ್ಟವಾಗಿ ಬರೆದು ತಿಳಿಸಿ..  ಮನದಾಳದ ಮಾತುಗಳನ್ನು ಹಂಚಿಕೊಳ್ಳವ ಅವಕಾಶ ಕಲ್ಪಿಸಿದ್ದಕ್ಕೆ .. ಮನಸ್ಪೂರ್ವಕ ಧನ್ಯವಾದಗಳು.. :)

|| ಪ್ರಶಾಂತ್ ಖಟಾವಕರ್ ||

1 comment:

  1. ತುಂಬಾ ಒಳ್ಳೆಯ ವಿಚಾರ ಸರ್... ನಿಮ್ಮ ಇಂತಹ ಒಳ್ಳೆಯ ವಿಚಾರಗಳು,ಒಳ್ಳೆಯ ಪದಗಳು/ಭಾವನೆಗಳು ನನ್ನಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದೆ.. ನಾನು ಕವನ ಬರೆಯುತ್ತೇನೆಂದು ಅಂದುಕೊಂಡಿರಲೆ ಇಲ್ಲ... ನಿಮ್ಮ ಪ್ರಯತ್ನ ವಿಶ್ವವ್ಯಾಪಿಯಾಗಿ ಯಶಸ್ವಿಯಾಗಲಿ... ನನ್ನ ಪ್ರಯತ್ನಗಳಿಗೆ ಯಾವಾಗಲೂ ನಿಮ್ಮ ಆಶೀರ್ವಾದ,ಪ್ರೋತ್ಸಾಹ ಕೋರುವ

    -ಶಿಶಿರ್..

    ReplyDelete