Wednesday, 8 February 2012

ಚಿತ್ರ ನೋಡಿ ಕವನ ಬರೆಯಿರಿ - 1ನಮಗಿರೆಂಬೆಯೇ ಹಾಸಿಗೆಯಾಗಿಹುದು
ನಮ್ಮತ್ತ ಸುಳಿಯದಿಹುದು ಚಿಂತೆಯೆಂಬ ಭಾವ 
ನಿದ್ದೆಯೆಂಬ ಭಾವ ಆವರಿಸಿಹುದು ನಮ್ಮನ್ನು 
ನಮಗಳ ಶಾಖವೇ ಹೊದಿಕೆಯಾಗಿಹುದು 
ನಾವೇ ಸುಖಿಗಳಾಗಿಹು... 
ನಮ್ಮ ಸುಖ ನಿಮಗಿಲ್ಲದಿಹುದು...!!!! 

December 29, 2011 at 10:14pm 
************************************************

ನಾವೆಲ್ಲಾ ಒಂದೇ ಬಳಗ 
ಮಾಡೆವು ನಾವೆಂದು ಕಾಳಗ 
ಒಗ್ಗಟ್ಟೇ ನಮ್ಮ ಬಲ 
ಎದುರಿಸುವೆವು ಈ ಚಳಿಗಾಲ ... 

December 29, 2011 at 11:03pm 
************************************************

ಮುಖ ಯಾಕೆ ತಿರುಗಿಸಿಕೊಂಡು ಮಲಗಿದ್ದೀರಾ ಸುಂದರಿಯರೇ...?
ನಿಮ್ಮ ಸೌಂದರ್ಯಕ್ಕೆ ಮರುಳಾಗಿ ಯಾರಾದರೂ ಕೊಂಡೊಯ್ದರೇ?? ಅನ್ನೊ ನಾಚಿಕೆಯೆ..? 

December 29, 2011 at 11:24pm 
************************************************

ನೂರಾದರೇನು ನಮ್ಮ ಬಣ್ಣ 
ನಾವೆಂದು ಒಂದೇ ಅಣ್ಣ... 
ನಮ್ಮಂತೆ ನೀವಿರಲೆಂಬ 
ನಮ್ಮ ಬಯಕೆಗೆ ನೀರೆರೆಯಿರಣ್ಣ..:))) 

December 30, 2011 at 6:53am 
************************************************

ಒಬ್ಬರನ್ನೊಬ್ಬರ ತಬ್ಬಿಕೊಳ್ಳಲಾಗದ ವ್ಯಥೆಯ ಮರೆತು
ಸಹೋದರತೆಯ ಮೆರೆದಿರಾ, ತಾಗಿಕೊಂಡು ಕುಳಿತು 

ನೋಡಿ ಕಲಿಯೋ ಮನುಜ ಇವುಗಳೊಳಗಿನ ಅನ್ಯೋನ್ಯತೆಯ 
ಕತ್ತರಿಸಿ ಹಾಕಿರೋ ನಿಮ್ಮ ನಿಮ್ಮೊಳಗಿನ ವೈಷಮ್ಯತೆಯ 

December 30, 2011 at 8:30am 
************************************************

""ನಾವು ಬಣ್ಣದ ಹಕ್ಕಿ,
ಹೆದರಿಸಬೇಡಿ ನಮ್ಮನ್ನು ಕುಕ್ಕಿ, 
ನಮ್ಮಿಂದ ಒಳ್ಳೇದನ್ನು ಹೆಕ್ಕಿ, 
ತಿಂದು ತೇಗಬೇಡಿ ನಮ್ಮ ಮುಕ್ಕಿ."" 

December 30, 2011 at 12:55pm 
************************************************

.. "ಗೂಡಿಲ್ಲದ ಕಾಯಗಳು" 

ಅಲ್ಲಿತ್ತು ನಮ್ಮೂರು
ಸುತ್ತಲೂ ಹಚ್ಚ ಹಸಿರು
ಬಂಧು ಬಳಗ ಸಾವಿರಾರು
ನಮಗೆಂದೇ ಪಕ್ಷಿಧಾಮ 
ಹಸಿರ ನಡುವಲ್ಲಿ ನಮ್ಮ ಪ್ರೇಮ 

ಬಂದು ಇಲ್ಲೀಗ.. ಬದಲಾವಣೆ ಎಂದು 
ಮಾಡಿರುವರು ಎಲ್ಲ ಹಸಿರ ನಿರ್ನಾಮ 
ಮುದ್ದಿನ ಗೂಡುಗಳೆಲ್ಲಾ ಎಲ್ಲೋ ಮಾಯ 
ಈಗ ಅಲೆಮಾರಿ ಜೀವನ ನಮ್ಮ ಕಾರ್ಯ 
       ಮನಸ್ಸಿನ ಒಳಗೀಗ ಆಗಿದೆ ಆರದ ಗಾಯ .. :) 

|| ಪ್ರಶಾಂತ್ ಖಟಾವಕರ್ || 

December 30, 2011 at 7:36pm 
************************************************

‎:ನಾನೂ ಬರೆದೆನೊಂದು:
ನಾನೂ ಬರೆದೆಯೊಂದ ಕವಿತೆ 
ಪದಗಳ ಹುಡುಗಿ ಕವಿತೆಯಂದ್ರೇ ವ್ಹಾ... ಕವಿತೆ 
ಅದ ಕೇಳಿ ತಲೆದೂಗಿ 
ಮಲಗಿದವು ಮೈಮರೆತು ಹಾಯಾಗಿ 

December 30, 2011 at 10:44pm 
************************************************

ಓ ಮರಿಹಕ್ಕಿಗಳೇ ಭಾಗ್ಯವೆಂದರೇ ನಿಮ್ಮದೆ.

ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿಮ್ಮದೆ. 

ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ. ಜಾತಿ ಧರ್ಮದ ಗೊಡವೇಯೇ ಇಲ್ಲದ ಭಾಗ್ಯವೆಂದರೇ ನಿಮ್ಮದೆ. 

-ನಂದೀಶ್ ಬಂಕೇನಹಳ್ಳಿ 

January 4 at 12:18pm 
************************************************

ನಮಗಿಲ್ಲಾ ಭವ್ಯ ಭಂಗಲೆ-ಮಹಲುಗಳ ಹಂಗು 
ನಮಗಿಲ್ಲಾ ಕನಸುಗಳೆಂಬ ಭವ್ಯ-ಬೃಂಗಗಳ ಗುಂಗು | 

ನಮಗಿಲ್ಲಾ ಊರು-ಕೇರಿ ಉದ್ದರಿಸುವ ಉದ್ದುದ್ದ ಭಾಷಣದ ಪುಂಗಿ 
ನಮಗಿಲ್ಲಾ ದುರಾಶೆ-ದುಂದುವೆಚ್ಚದ ಅಂದಾಭಿಮಾನದ ನಡೆಯ ಡೋಂಗಿ | 

ನಮಗಿಲ್ಲಾ ಜಗದಂಕೆಯನ್ನು ಸಾಧಿಸಬೇಕೆಂಬ ಇನ್ನಿಲ್ಲದ ಆಕಾಂಕ್ಷೆ 
ನಮಗಿಲ್ಲಾ ಜಗದೇಳಿಗೆ ನಮ್ಮಿಂದಲೇ ಆಗಲೆಂಬ ಮಹತ್ವಾಕಾಂಕ್ಷೆ | 

ನಮಗಿಲ್ಲಾ ಹಿರಿ-ಕಿರಿದೆಂಬ ಬೇಧ-ಭಾವಂಗಳು 
ನಮಗಿಲ್ಲಾ ಬಣ್ಣದ ಬಾನಾಡಿಗಳೆಂಬ ಕನವರಿಕೆಯ ಭಂಗಿಗಳು | 

ನಮಗೆಲ್ಲಾ ಅಗೋಚರ ಶಕ್ತಿಯ ಸೃಷ್ಟಿಯೇ ವಾತಾಯನ 
ನಮಗೆಲ್ಲಾ ನಮ್ಮೆಲ್ಲರ ಸಮೂಹವೇ ಬೆಚ್ಚಗಿನ ರಕ್ಷಾಯನ | 

January 4 at 12:25pm 
************************************************

ಬಾಯಾರಿಸಿ ದಣಿವಾರಿಸಿಕೊ ನಿಲ್ಲದಿರಲಿ ಪಯಣ 
ರೆಕ್ಕೆ ಬಿಚ್ಚಿ ಎದೆ ಸೆಟೆಸಿಕೋ ಮುಂದುವರಿಯಲಿ ಯಾನ 

January 5 at 1:41pm 
************************************************

ಅಮ್ಮನಿಲ್ಲದ ಗುಬ್ಬಿಯಿಂಡು 
ನೋವಿನ ಅನ್ನವುಂಡು 
ವಾತ್ಸಲ್ಯದ ಹಪಹಪಿಕೆಗೆ
ಪ್ರೀತಿಯ ಗುಟುಕಿಗೆ
ಕಾದು ಕುಳಿತಿರೆ
ಅಮ್ಮನಿಲ್ಲ 
ತುತ್ತಿನ ಸವಿಯುಣಿಸಲು 
ಎರವಲಾಗಿ ಕೊಡುವಿರ 
ಯಾರಾದರು ಮಾತೃ ಪ್ರೇಮವ! 

- ಕನ್ನಡ ಶ್ರೀಗಂಧ. 

January 7 at 3:36pm 
************************************************

ಓ ಮನುಜರೇ....!
ನಮಗಿಲ್ಲ ನಿಮ್ಮಂತೆ ಮಹಲಿನ ಬಯಕೆ.. 
ಬಂಗಲೆಯಲೂ ಏಕಾಂಗಿಗಳು.. ನಿಮ್ಮಂತೆ ನಾವಲ್ಲ. 
ಕೂಡಿ ಬಾಳುವುದಾ..ಹಂಚಿ ತಿನ್ನುವುದಾ.. 
ನೋಡಿ ಕಲಿಯಿರೋ ನಮ್ಮಿಂದ...:) 

February 2 at 3:04pm 
************************************************

ಒಂದೇ ಗೂಡಲ್ಲಿ 
ನಾವು ಒಂದುಗೂಡಿಹೆವು 
ಒಂದೇ ಬಳ್ಳಿಯ ಹೂಗಳಂತೆ 

ಒಂದೇ ಬಳ್ಳಿಯಲಿ 
ಕುಳಿತಿಹೆವು ನಾವು 
       ಒಂದೇ ತಾಯಿಯ ಮಕ್ಕಳಂತೆ ..... 

February 2 at 3:44pm
************************************************

No comments:

Post a Comment