ಮೇಲೊಂದು ಕೆಳಗೊಂದು ರೈಲ್ ಬಿಡೋಕ್ಕೆ ...
(ಅವಶ್ಯವೆನ್ನಿಸಿದರೆ ಈ ವಿಚಾರದಲ್ಲಿ ಮತ್ತೆ ಹಲವು ಮಾತುಗಳನ್ನು ಮುಂದುವರೆಸುತ್ತೇನೆ.....)
ಪಕ್ಕಪಕ್ಕದಲ್ಲೆ ನಾಲ್ಕ್ ಗಾಲಿ ಗಾಡಿಗಳು ರೇಸ್ ಆಡೋಕ್ಕೆ...
ನಾಲ್ಕ್ ನಿಮಿಷ ಕೂತು ಟೀ ಕಾಫಿ ಕುಡಿಯೋಕ್ಕೆ ಅರಮನೆ ಅಷ್ಟು ಜಾಗ...
ಊರು ಉದ್ದಾರ ಅನ್ನೋ ನೆಪದಲ್ಲಿ ಹೊಲಾನೆಲ್ಲಾ ಹಾಳ್ ಮಾಡಿ ಕಳ್ಳಾಸ್ತಿ... ಸುಳ್ಳಾಸ್ತಿ .. ಅಂತಾ ಹೆಸರಿಗೊಂದಿಷ್ಟು , ಹಂಚೋಕೊಂದಿಷ್ಟು ..
ಇನ್ನೂ ಅದೆಲ್ಲಿ ಉಳಿಯುತ್ತೆ ಹರಿಸು .. ಅದುವೇ ಮಳೆರಾಯನ ಕೈ ಬೀಸಿ ಕರೆಯೋ ಉಸಿರು ..
ಅಜ್ಜಿ ಕಥೆ ಅಂತಾ ಅದು ಇದು ಕೇಳಿ ಅಚಾರ ಮಾಡೋ ಕಾಲಕ್ಕೆ ಸರಿಯಾಗಿ ಟೈಮ್ ಪಾಸ್ ಆಗಿ ಅದೆಲ್ಲೋ ಹನಿ ಉದುರುತ್ತೆ ಅಂದ್ರೆ .. ನಾ ಮಂತ್ರ ಊದಿದ್ದು ಆ ಮಳೆ ಉದುರೋಕ್ಕೆ ಅಂದ್ರೆ .. ಅದೆಂಗೆ ಜನ ತಲೆ ಅಲ್ಲಾಡಿಸ್ತಾರೋ ದೇವರೇ ಬಲ್ಲ...
ಮಳೆ ಬರೋಕ್ಕೆ ಏನೇನೋ ಮಾಡಬೇಕಾ ... ಭೂಮಿಯಿಂದ ನೀರು ಆವಿ , ಆಮೇಲೆ ಮೋಡ , ಅದು ನಂತರ ಮಳೆ ..
ಆದರೆ ಇಲ್ಲಿ ಭೂಮಿಯಲ್ಲಿ ಆ ನೀರೆ ಇಲ್ಲಾ.... ಊರ ಮಧ್ಯೆ ಫಾರಿನ್ ಕಂಪನಿ ಬಿಸಿನೆಸ್ ಮಾಡೋಕ್ಕೆ ಕೆರೆ ಮುಚ್ಚಿ ಬಿಲ್ಡಿಂಗ್ ಎಬ್ಬಿಸಿ .. ಬಾ ಬಾ ಮಳೆಯೇ ಅಂದ್ರೆ ಅದೆಲ್ಲಿ ಅಂತಾ ಬರಬೇಕು... ಮೇಲಿಂದ ಆ ಮಳೆರಾಯ ನೋಡ್ತಾನೆ ಹಸಿರು ಬಣ್ಣ ಅಲ್ಲಾಡ್ತಾ , ಒಲಾಡ್ತಾ ಇದ್ರೆ ಸಾಕು , ಆ ಜಾಗಕ್ಕೆ ಹೋಗಿ ಬೀಳ್ತಾನೆ .. ಗಾಳಿ ಬೀಸಿದಲ್ಲಿ ಗಾಳಿಪಟ .. ಗಾಳಿ ಎಳೆದಲ್ಲಿ ಹನಿಹನಿ ಅಮೃತ .. ಆ ಗಾಳಿ ಓಡಲು , ಹಾರಲು ದಿಕ್ಕು ಬದಲಿಸಿ ಕಾರಣವು ಹರಿಸು ತೂಗಿ ಕೂಗುವ ವಿಸ್ಮಯವು .. :)ಅರಿತವರಿಗದು ಅಚ್ಚರಿಯ ಸಂಗತಿ ಏನಲ್ಲಾ .. ಆದರೆ ಅರಿತು ಅದರ ಕುರಿತು ಅನುಮಾನಿಸುವುದೇ ಅಲ್ಲಿ ಇಲ್ಲಸಲ್ಲದ ಆಚಾರಗಳ ಹುಟ್ಟಿನಲ್ಲಿ ಒಂದು ಸಂಪ್ರದಾಯವನ್ನೇ ಸೃಷ್ಟಿಸುತ್ತದೆ... ಇದರಿಂದ ಯಾರಿಗೆ ಅದೆಷ್ಟು ಪ್ರಯೋಜನ ಎಂಬುದು ಇನ್ನೂ ತಿಳಿದು ಸಹ ಯಾರು ತಿಳಿಯದಂತಹಾ ವಿಷಯ ವಿಚಾರವಾಗಿ ಕಾಣಿಸುವುದಲ್ಲದೆ ... ಸತ್ಯವನ್ನು ಮರೆಮಾಚುವಂತೆ ಮಾಡುತ್ತಿದೆ..
(ಅವಶ್ಯವೆನ್ನಿಸಿದರೆ ಈ ವಿಚಾರದಲ್ಲಿ ಮತ್ತೆ ಹಲವು ಮಾತುಗಳನ್ನು ಮುಂದುವರೆಸುತ್ತೇನೆ.....)
No comments:
Post a Comment