ಕೆಲವು ಸಾರಿ ತುಂಬಾ ಸಿಟ್ಟು
ಕೆಲವು ಸಾರಿ ತುಂಬಾ ಬೇಸರ
ಕೆಲವು ಸಾರಿ ತುಂಬಾ ಆತುರ
ಕೆಲವು ಸಾರಿ ತುಂಬಾ ಚಿಂತೆ
ಕೆಲವು ಸಾರಿ ತುಂಬಾ ಖುಷಿ
ಕೆಲವು ಸಾರಿ ಇನ್ನೂ ಏನೇನೋ ಆಗುತ್ತೆ
ಯಾವುದಕ್ಕೆ ಇದೆಲ್ಲಾ ಹೀಗೆಲ್ಲಾ ಅಂದ್ರೆ
ಅದು ಒಂದೇ ವಿಚಾರ ತುಂಬಾ ಕಾಡುತ್ತೆ
ಯಾಕೆಲ್ಲಾ ಕ್ಷಣ ಕ್ಷಣ ಹೀಗಾಗುತ್ತೆ ಅಂದ್ರೆ
ಬಣ್ಣ ಬಣ್ಣದ ಕನಸುಗಳು ಮಾಯವಾಗಿರುತ್ತೆ
~~~~~~~~~~~~~~~~~~~~~~~~~~~~~~
ಪ್ರತಿಭಟನೆ ಮಾಡಬೇಕು ಅಂತಾ ಕಪ್ಪು ಬಣ್ಣ ಬಳಸ್ತಾರೆ .. ಆದ್ರೆ ಅದರ ಜೊತೆ ನಮ್ಮ ಮನದಲ್ಲಿ ಉಂಟಾಗುವ ವಿಭಿನ್ನ ಭಾವನೆಗಳನ್ನ ಒಂದೊಂದು ಬಣ್ಣದಲ್ಲಿ ಪ್ರತಿಬಿಂಬಿಸಿದಾಗ, ಅಲ್ಲಿ ಕೋಪದ ಕೆಂಪು , ಶಾಂತಿಯ ಬಿಳಿ , ಭಯದ ಕಪ್ಪು , ಬೇಸರದ ನೆರಳಿನಂತೆ ಬೂದು , ಆಸೆಯ ಆಗಸದಂತೆ ನೀಲಿ , ಸಂತಸದ ಹಸಿರು , ಭೂಮಾತೆಯ ಭಕ್ತಿ ಗೌರವದಲ್ಲಿ ಕಂದು .... ಹೀಗೆ ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ ಕಳೆದು ಹೋಗುತ್ತೆ .. ಏನೂ ಇಲ್ಲಾ ಅಂತಾ ಅಂದ್ರೆ ಜೀವನವೇ ಕಪ್ಪಾಗಿ ಕಾಣುತ್ತೆ... ಸ್ವಲ್ಪ ಸ್ವಲ್ಪ ಆಸೆಗಳು, ಕನಸುಗಳು ನಿಜವಾಗೋ ಕಾಲ ಬಂದ್ರೆ ಬದುಕಲ್ಲಿ ಹಸಿರು ನೀಲಿ ಬಿಳಿ ತುಂಬಾ ಇಷ್ಟ ಆಗುತ್ತೆ .. ಆದರೆ ಈ ಅನ್ನೋದು ಪ್ರೀತಿಗೂ ಸರಿ ದ್ವೇಷಕ್ಕೂ ಸರಿ .. ಹಲವಾರು ಜನಗಳ ವಿಭಿನ್ನ ಅನಿಸಿಕೆಗಳ ನಡುವೆ ನಿಜವಾದ ನ್ಯಾಯ ಮರೆಯಾಗಿ ಹೋಗ್ತಿದೆ.. !!
No comments:
Post a Comment