Saturday 9 June 2012

ಹೊಸ ಸಿನಿಮಾ + ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)


ಚಿತ್ರ ಇಷ್ಟ ಆಗದೆ ಇರುವುದಕ್ಕೆ ಕಾರಣ ಹೆಚ್ಚು ಹೆಚ್ಚು ಚಿತ್ರಗಳ ಬಿಡುಗಡೆ ಏಕಕಾಲಕ್ಕೆ ..


ರಸ್ತೆ ಕಾಮಗಾರಿ, ಅಲ್ಲಲ್ಲಿ ಪೈಪ್`ಲೈನ್ , ಕೇಬಲ್ ವರ್ಕ್ , ದೊಡ್ಡ ದೊಡ್ಡ ಊರುಗಳಲ್ಲಿ ಫ್ಲೈಓವರ್ ... ಹೀಗೆಲ್ಲಾ ಆಗಿ ಹೆಚ್ಚು ತೊಂದರೆ ಚಿತ್ರಮಂದಿರಗಳತ್ತ ಬರಲು .. 


ರಜಾ ದಿನಗಳಲ್ಲಿ ಸಂಬಂಧಿಕರು ಊರಿಗೆ ಬಂದಾಗ .. ಸಿನಿಮಾ ಎಲ್ಲಾ ಬೇಡ ನಮ್ಮೂರಲ್ಲಿ ನೋಡ್ತೀವಿ .. ಅದನ್ನು ಬಿಟ್ಟು ಬೇರೆ ಏನಾದರೂ ತೋರಿಸಿ (ದೇವಸ್ಥಾನ , ಹೋಟೆಲ್ , ಪಾರ್ಕ್ , ಹೊಸ ಶಾಪಿಂಗ್ ಕಾಂಪ್ಲೆಕ್ಸ್ , ಪ್ರೇಕ್ಷಣೀಯ ಸ್ಥಳಗಳು) ಅಂತಾ ಕೇಳ್ತಾರೆ .. 


ತಕ್ಷಣಕ್ಕೆ ಒಂದು ಚಿತ್ರದ ಬಗ್ಗೆ ಮೊಬೈಲ್ ಅಲ್ಲಿ ಮಾತುಕತೆ .. ನಂತರ  ಮನೆಯಲ್ಲಿ ನಮ್ಮ ಫ್ರೆಂಡ್ ಹೇಳಿದ ಆ ಸಿನಿಮಾ ಸೂಪರ್ ಇದೆ ಅಂತಾ ಒಬ್ಬರು , ಇದೇ ರೀತಿ ಮತ್ತೊಬ್ಬರು .. ಅಣ್ಣ ತಮ್ಮ ಅಕ್ಕ ತಂಗಿ ... ಹೀಗೆ ಕಿತ್ತಾಡಿ ಕೊನೆಯಲ್ಲಿ ಯಾವುದೋ ಒಂದು ಸಿನಿಮಾ ನೋಡೋಕ್ಕೆ ಅಷ್ಟೇ ಸಾಧ್ಯ ..  


ಈ ಎಲ್ಲದರ ನಡುವೆ ಹೊಸ ಸಿನಿಮಾ ಹೇಗಿದೆ ಅನ್ನುವ ಆಲೋಚನೆಯೇ ಇರುವುದಿಲ್ಲ .. 
ಪ್ರೇಕ್ಷಕ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಬುದ್ದಿವಂತ ಎನ್ನುವುದು ನಿಜ ಒಪ್ಪುತ್ತೇವೆ .. ಆದರೆ ಇನ್ನೂ ಒಂದು ಆಯಾಮದಲ್ಲಿ ಆಲೋಚನೆ ಮಾಡಿದಲ್ಲಿ ಪ್ರೇಕ್ಷಕ ತನ್ನ ಬುದ್ದಿಯನ್ನು ಹೊಸ ಚಿತ್ರಗಳ ಗುಣಮಟ್ಟ ಅಳೆಯಲು ಉಪಯೋಗಿಸುತ್ತಿಲ್ಲ ಅನ್ನುವುದೂ ಸಹ ನಿಜವೇ ಆಗಿದೆ..
ಹೀಗಿರುವಾಗ ಚಿತ್ರರಂಗದಲ್ಲಿ ಹೊಸ ಹೊಸ ರೀತಿಯಲ್ಲಿ , ಹತ್ತಾರು ದೃಷ್ಟಿಕೋನಗಳಲ್ಲಿ ಆಲೋಚಿಸಿ ಪ್ರಚಾರ ಕಾರ್ಯ ಮಾಡಬೇಕು .. ನಮ್ಮಿಂದ ಆಗುವಷ್ಟು ಪ್ರಚಾರದ , ಪ್ರೋತ್ಸಾಹದ  ಕಾರ್ಯವನ್ನು ನಾವಂತೂ ಹೊಸ ಹೊಸ ಪ್ರತಿಭೆಗಳಿಗೆ ಕೊಟ್ಟೆ ಕೊಡುತ್ತೇವೆ.. ಆ ಹೊಸತನ ನಮಗಿಷ್ಟವಾದಲ್ಲಿ ಖಂಡಿತ ಪ್ರೋತ್ಸಾಹ ಬೆಂಬಲಗಳಿಗೆ ಸಾಧ್ಯವಾದಷ್ಟೂ ಜನರನ್ನು ಸೇರಿಸುತ್ತೇವೆ .. ಹೊಸ ಹೊಸ  ರೀತಿಯ  ಪ್ರಚಾರ  ಹಾಗೂ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯ  ಮುಂದುವರಿಸಬೇಕು ಎನ್ನುವುದು ನಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು .. :)

1 comment:

  1. ಈ ಬರಹ ಹಲವು ಆಯಾಮಗಳನ್ನು ಬಿಚ್ಚಿಡುತ್ತದೆ.

    ನನ್ನ ದೃಷ್ಟಿಯಲ್ಲಿ ಯಾಕೆ ಸಿನಿಮಾಗಳು ಸೋಲುತ್ತಿವೆ ಅಂದ್ರೆ:

    ೧. ನಿರ್ಮಾಪಕನೂ ಒಬ್ಬ ತಂತ್ರಜ್ಞ ಅವನಿಗೂ ಸಿನಿಮಾ ಪರಿಕಲ್ಪನೆ ಇರಬೇಕು. ಆದರೆ ಯಾವುದೋ ದುಡ್ಡು ತಂದು ತಮ್ಮ ತೆವಲಿಗೆ ಸಿನಾಮಾ ನಿರ್ಮಿಸಿದರೆ. ಅದು ಅಸಂಬದ್ಧ.

    ೨. ಇರುವ ಚಿರ ಮಂದಿರಗಳನ್ನೆಲ್ಲಾ ಕೆಡವಿ, ಸಿನಿಮಾ ತೋರಿಸ್ತೀವಿ ಅಂದ್ರೆ ಹಾಸ್ಯಾಸ್ಪದವೇ.

    ೩. ದೊಡ್ಡ ಬ್ಯಾನರಿನ ಚಿತ್ರಗಳು ಮುಕ್ಕಾಲು ಪಾಲು ಚಿತ್ರ ಮಂದಿರಗಳನ್ನು ಕಬಳಿಸಿ, ಪುಟ್ಟ ನಿರ್ಮಾಪಕರಿಗೆ ಥೀಯಟರೇ ಸಿಗದಾಗಲೂ ಸಿನಿಮಾ ಎಲ್ಲಿ ನೋಡಬೇಕು?

    ೪. ಛೇಂಬರ್ ಯಾಕೆ ಚಿತ್ರ ನಿರ್ಮಾಣಕ್ಕೆ ಬ್ರೇಕ್ ಹಾಕಿ, ವರ್ಷಕ್ಕೆ ಇಂತಿಷ್ಟೇ ಸಿನಿಮಾ ಬರಬೇಕು ಅಂತ ಕಟ್ಟು ನಿಟ್ಟು ಮಾಡಿ, ಕಂಪ್ಯೂಟರ್ ಮೂಲಕ ಚಿತ್ರ ಮಂದಿರ ಯಾಕೆ ಹಂಚಬಾರದು?

    ೫. ಮುಖ್ಯವಾಗಿ ನಮ್ಮ ನಿರ್ಧೇಶಕರೂ ಪ್ರೇಕ್ಷಕನನ್ನು ಚಿತ್ರ ಮಂದಿರಕ್ಕೆ ಕರೆತರುವಂತಹ ಸಿನಿಮಾಗಳು ಮಾಡಬೇಕು. ಮಚ್ಚು, ಲವ್ವು, ಮಸಾಲ ಮತ್ತು ಓಬೀರಾಯನ ಕಾಲದ ಕಥೆಗಳಲ್ಲದೆ ಹೊಸದಾಗಿ ಏನಾದರೂ ಯೋಚಿಸಬೇಕು.

    ೬. ರಿಮೇಕ್ ಮತ್ತು ಡಬ್ಬಿಂಗ್ ವಿರೋಧಿಸಬೇಕು.

    ReplyDelete