ಇತಿಹಾಸವೂ ಸಹ ಭವಿಷ್ಯದಂತೆ ವಿಷಯ ವಿಸ್ಮಯ ...
ಮುಂದೇನು ಎನ್ನುವುದನ್ನು ತಿಳಿಯುವುದು ಕಷ್ಟ...
ಹಿಂದೆನಿತ್ತು ಎನ್ನುವುದು ಸಹ ಅಷ್ಟೇ ಅಚ್ಚರಿಯನ್ನು ಕೊಡುತ್ತದೆ...
ಒಂದು ರೀತಿಯಲ್ಲಿ ಯಾವುದನ್ನು ಯಾರು ಬರೆಯುತ್ತಾರೋ ಅದು ನಿಜ
ಮತ್ತು ಅದಕ್ಕಷ್ಟೇ ಆಧಾರಗಳನ್ನು ಹುಡುಕಿ ಅದು ನಿಜವೋ ಅಲ್ಲವೋ ..
ಎನ್ನುವ ಸಂಶೋಧನೆಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ...
ಯಾವುದೋ ಒಂದು ಬೆಟ್ಟದಡಿಯಲ್ಲಿ ಹಳೆಯ ಅರಮನೆ ಹೂತು ಹೋಗಿದೆ
ಮತ್ತು ಅಲ್ಲಿ ಯಾರ ಆಳ್ವಿಕೆ ಇತ್ತು ಹಾಗೂ ಎಷ್ಟು ವಜ್ರ , ಚಿನ್ನ , ಬೆಳ್ಳಿ , ಮುತ್ತುರತ್ನ ಹವಳದ ಒಡವೆಗಳು ಈಗಲೂ ಸಿಗುತ್ತದೆ ಎಂದರೆ .. ಆ ಬೆಟ್ಟವನ್ನೇ ಕಡಿದು , ಪುಡಿ ಪುಡಿ ಮಾಡಿ , ಕೊನೆಯಲ್ಲಿ ಏನೂ ಸಿಗದಿದ್ದರೂ ಸಹ ಕಟ್ಟಡಗಳಿಗೆ ಕಲ್ಲಾದರೂ ಸಿಕ್ಕಂತೆ ಆಗಲಿ ಎನ್ನುವ ಆಲೋಚನೆಯಲ್ಲಿ ಎಲ್ಲಾ ಬೆಟ್ಟಗುಡ್ಡಗಳ ಕಡಿದು ಹಾಕಿ , ನಿಜವಾದ ಇತಿಹಾಸವನ್ನೇ ಸ್ವಾರ್ಥ ಲಾಭಕ್ಕಾಗಿ ಸಂಶೋಧನಾ ಕಾರ್ಯದಲ್ಲಿ ರಾಜಕೀಯ ನಡೆಸುವ ಕಾಲವಿದು .. ಇಲ್ಲಿ ನಾವು ಏನನ್ನು ಓದಬೇಕು ಎಂದು ಆಲೋಚಿಸುತ್ತೆವೋ ಅದು ಶಾಲಾಕಾಲೇಜು ಪಠ್ಯಕ್ರಮದಲ್ಲಿ ಕೇವಲ ಪರಿಚಯ ಮಾಡಿಸುವ ವಿಷಯವಾಗಿ ಮಾತ್ರವೇ ಇರುತ್ತದೆ.. ಸಂಪೂರ್ಣ ಮಾಹಿತಿ ಅನ್ನೋದನ್ನು ಬೇರೆ ಕಡೆಯೇ ಪಡೆಯಬೇಕು ..
ಕಾರಣ ಇತಿಹಾಸವೂ ಒಂದು ರೀತಿಯಲ್ಲಿ ಆಕರ್ಷಣೆಯ ವಿಚಾರ .. ಕೆಲವರಿಗೆ ರಾಜ ಮಹಾರಾಜರ ಕಥೆಗಳು ಬೇಕು , ಕೆಲವರಿಗೆ ದೇವಾಲಯಗಳು ಮತ್ತು ನೃತ್ಯಗಾರ್ತಿಯರ ಕಥೆಗಳು ಬೇಕು , ಇನ್ನೂ ಕೆಲವರಿಗೆ ಇತಿಹಾಸದಲ್ಲಿ ಕಳೆದು ಹೋಗಿದೆ ಎನ್ನುವ ವಸ್ತುಗಳ ಹುಡುಕುವ ಕಾರ್ಯದಲ್ಲಿ ಆಸಕ್ತಿ , ಮತ್ತೆ ಹಲವರಿಗೆ ಇತಿಹಾಸದ ರಾಜಕೀಯ ಬೇಕು , ಹಾಗೆಯೇ ಕೆಲವು ವಿಚಿತ್ರ ಘಟನೆಗಳ (ದೆವ್ವ , ಭೂತಗಳ , ಮಾಟ ಮಂತ್ರ ಯಂತ್ರ ತಂತ್ರಗಳ) ತಿಳಿಯುವ ಕೋರಿಕೆ.. , ಇನ್ನೂ ಹಲವರಿಗೆ ಇತಿಹಾಸದಲ್ಲಿ ವಿಜ್ಞಾನದ ಪಾತ್ರ ಏನು .. , ಅದೇ ರೀತಿ ಇತಿಹಾಸದಲ್ಲಿ ಸಾಹಿತಿಗಳ , ಸಾಹಿತ್ಯದ (ವಿವಿಧ ಭಾಷೆಗಳು) ಹುಟ್ಟು ಮತ್ತು ಬೆಳವಣಿಗೆಯ ಹಂತ ಹಂತದ ಬದಲಾವಣೆ .. ಇದನ್ನೆಲ್ಲಾ ಯಾರಿಗೆ ಎಷ್ಟು ಆಸಕ್ತಿಯೋ , ಅದಕ್ಕೆ ಅನುಗುಣವಾಗಿ ಪಠ್ಯಕ್ರಮ ಸಿದ್ಧವಾಗುತ್ತದೆ .. ಯಾವುದೇ ವಿಚಾರವನ್ನು ಸತ್ಯ ಎಂದು ಹೇಳಿದಾಗ ಅಲ್ಲಿ ಒಂದು ಸಣ್ಣ ಸುಳ್ಳು ನಮಗರಿವಿಲ್ಲದಂತೆ ಸೇರಿರುತ್ತದೆ .. ಆದರೆ ಅದನ್ನು ಊಹೆಯ ಸತ್ಯ ಮತ್ತು ಸಂಶೋಧನೆಯ ಮಾಡಲು ಒಂದು ಆರಂಭ ಆಧಾರ ಎಂದು ಪರಿಗಣಿಸಿ ಒಪ್ಪಲೇಬೇಕಾಗುತ್ತದೆ .. ಅದುವೇ ಇತಿಹಾಸ ಮತ್ತು ಬದಲಾವಣೆ ಭವಿಷ್ಯ .. :)