ಒಂದು ವರ್ಷದ ಸರ್ಕಾರಿ ಶಾಲೆ (A year in government school)
***************************************************************
***************************************************************
ಇದು ನಿಜ.. ಅದೇನೆಂದರೆ ನಾವು ಹುಬ್ಬಳ್ಳಿಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದೋವಾಗ ನಮಗೆಲ್ಲಾ ಒಂದು ಪುಸ್ತಕವನ್ನೇ ಮಾಡಿಸಿದ್ದರು .. ಅದಕ್ಕೆ ಹೆಸರು ಒಳ್ಳೆಯ ಕೆಲಸ .. ನಾವು ಆ ದಿನ ಮಾಡಿದ ಒಳ್ಳೆಯ ಕೆಲಸವನ್ನು ಅದರಲ್ಲಿ ಬರಿಯಬೇಕಿತ್ತು .. ಯಾವುದೇ ದಿನ ತಪ್ಪಿದರೂ ಆ ದಿನ ಮೇಷ್ಟ್ರು ತುಂಬಾ ಬೈಯುತ್ತಿದ್ದರು.. ಆದರೆ ಅದರಲ್ಲಿ ಮತ್ತೊಂದು ವಿಶೇಷ ಅಂದರೆ ನಮ್ಮ ಶಾಲೆಯಲ್ಲಿ ಚುನಾವಣೆ ಅಂತಾ ಮಾಡಿ , ಅದರಿಂದ ವಿದ್ಯಾರ್ಥಿ ನಾಯಕ ಮತ್ತು ನಾಯಕಿ ಅಂತ ಇಬ್ಬರನ್ನು ಆಯ್ಕೆ ಮಾಡ್ತಾ ಇದ್ರೂ .. ಆಗ ಮೊದಲ ಎರಡು ತಿಂಗಳು ಹುಬ್ಬಳ್ಳಿ ಊರು ಮತ್ತು ಶಾಲೆ ಹೊಸದು ಆದ್ದರಿಂದ ಸುಮ್ಮನೆ ಗೆಳಯರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕಿದ್ವಿ .. ಹೀಗೆ ದಿನಗಳು ಉರುಳಿದಂತೆ ಒಂದು ದಿನ ಆಶುಭಾಷಣ ಸ್ಪರ್ಧೆ ಅಂತಾ ನಡಿತು .. ಅದರಲ್ಲಿ ಶಾಲೆಯ ಆಟದ ಮೈದಾನ ಅನ್ನೋದು ಚೀಟಿಯಲ್ಲಿ ಸಿಕ್ಕ ವಿಷಯ .. ಅದಕ್ಕೆ ಐದು ನಿಮಿಷ ಮಾತಾಡಿದ್ದು ಕೇಳಿ ಕೆಲವು ಸ್ನೇಹಿತರು ನಮಗೇನು ಹೇಳದೆ ಚುನಾವಣೆಯಲ್ಲಿ ನಮ್ಮ ಹೆಸರು ಅಭ್ಯರ್ತಿಯಾಗಿ ಸೇರಿಸಿದ್ದಾರೆ.. ಆಗ ಬೇಡ ಅಂತಾ ಹೇಳಿ ನಮ್ಮ ಮೇಷ್ಟ್ರಿಗೆ ಹೇಳಿದ್ದಕ್ಕೆ ಹಾಗೆಲ್ಲಾ ವಾಪಾಸ್ಸು ತೆಗೆಯೋ ಹಾಗಿಲ್ಲಾ ಅಂದರು .. ನಾನು ಸಹ ಸುಮ್ಮನಾದೆ .. ಆದರೆ ಅದು ಒಂದು ಓಪನ್ ಎಲೆಕ್ಷನ್ .. ನಮ್ಮ ನೇಮ್ ಬೋರ್ಡ್ ಮೇಲೆ ಇರುತ್ತೆ .. ಅದರ ಕೆಳಗೆ ಒಬ್ಬೊಬ್ಬರೇ ಬಂದು ಒಂದು ಗೆರೆ ಹಾಕಬೇಕು (ಒಂದು ಅಂತ ಬರೀಬೇಕು) ಆಗ ಮೊದಲು ಹತ್ತು ಓಟ್ ಆಗೋವರೆಗೂ ನಮ್ಮ ಹೆಸರಿನ ಕೆಳಗೆ ಇದ್ದದ್ದು ಮೂರು ಮತ್ತು ನಮ್ಮದೊಂದು ಓಟ್ .. ಒಟ್ಟು ನಾಲ್ಕು ಮತಗಳು.. ಹಾಗೆಯೇ ಅದು ಮುಂದೆ ಮುಂದೆ ಸಾಗಿ ಮೂವತ್ತು ಓಟ್ ಮುಗಿದರೂ ಸಹ ನಾಲ್ಕೇ ಆಗಿತ್ತು .. ಇನ್ನೂ ಒಂದು ವಿಶೇಷ ಅಂದರೆ ನಮಗೆ ಎಲೆಕ್ಷನ್ ಅಲ್ಲಿ ನಿಲ್ಲೋಕ್ಕೆ ಇಷ್ಟ ಇಲ್ಲದೆ ಕಾರಣ ಬೇರೆಯವರಿಗೆ (ಅಂದರೆ ಹಿಂದಿನ ತಿಂಗಳು ಗೆದ್ದವರಿಗೆ) ಓಟ್ ಮಾಡೋಕ್ಕೆ ಹೋದರೆ , ನಮ್ಮ ಮೇಷ್ಟ್ರು ಹೇಳಿದ್ದು ಆ ರೀತಿ ಓಟ್ ಬೇರೆಯವರಿಗೆ ಹಾಕೋ ಹಾಗಿಲ್ಲಾ ಅಂತಾ.. ಅದಕ್ಕೆ ನಾವೇ ನಮ್ಮ ಹಾಕ್ಕೊಂಡಿದ್ದು .. ಅದು ಎಲ್ಲಾ ಮತದಾನ ಮುಗಿಯುವ ಅಷ್ಟೊತ್ತಿಗೆ ಒಂದು ಆಶ್ಚರ್ಯ ನಮಗಾಗಿ .. ಅದು ನಲವತ್ತಾರನೇ ಓಟ್ ಇಂದ ಎಲ್ಲ ಹುಡುಗ/ಹುಡುಗಿಯರು ನಮ್ಮ ಹೆಸರಿನ ಕೆಳಗೆ ಓಟ್ ಹಾಕಿದ್ದು.. ಅಲ್ಲಿಂದ ಇನ್ನೂರ ಮೂವತ್ತೆರಡು ಮತಗಳ ಅಂತರದಲ್ಲಿ ಗೆದ್ದ ನಂತರ ಆರು ತಿಂಗಳು ನಮ್ಮನ್ನೇ ಆಯ್ಕೆ ಮಾಡಿ ಗೆಲ್ಲಿಸುತ್ತಿದ್ದರು .. ಚಿತ್ರದುರ್ಗದಿಂದ ಹುಬ್ಬಳ್ಳಿಗೆ ಹೋದ ನಾವು ಅಲ್ಲಿ ಇದ್ದದ್ದು ಎಂಟು ತಿಂಗಳು ಮಾತ್ರ .. ಹಾಗೂ ನಂತರದಲ್ಲಿ ರಾಣೆಬೆನ್ನೂರಿಗೆ ಬಂದೆವು .. ಅಲ್ಲಿಯೂ ಸರ್ಕಾರಿ ಶಾಲೆ ಹಾಗು ಅಲ್ಲಿಯೂ ಮತ್ತೆ ಒಂದು ತಿಂಗಳಾದ ಮೇಲೆ ವಿದ್ಯಾರ್ಥಿ ನಾಯಕ ಪಟ್ಟ.. ಇಷ್ಟು ಕಥೆ ನಮ್ಮ ಶಾಲಾ ದಿನಗಳ ಆ ಸವಿನೆನಪುಗಳನ್ನು ಮತ್ತೊಮ್ಮೆ ಒಂದು ನೈಜ ಕಥೆಯನ್ನಾಗಿ ಎಲ್ಲರ ಮುಂದೆ ತರಲು ಕಾರಣರಾದ ನಮ್ಮ ಸ್ನೇಹಿತರೊಬ್ಬರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇವೆ.. ಹಾಗೂ ಇದರಲ್ಲಿ (ಕಥೆಯಲ್ಲಿ) ಕೆಲವು ಮುಖ್ಯ ಅಂಶಗಳನ್ನು ಮತ್ತೊಂದು ಕಥೆಯಾಗಿ ಹೇಳುತ್ತೇವೆ... ಹಾಗೂ ಈ ಕಥೆಯಲ್ಲಿ ಆಸಕ್ತಿ ಹುಟ್ಟಿಸುವ ಅಂಶಗಳು ಏನೂ ಇಲ್ಲ.. ಇದೆಲ್ಲಾ ಕೇವಲ ನೆನಪುಗಳು (ಕಥೆಯ ಆರಂಭವಷ್ಟೇ) .. ಮಾತನಾಡುವ ಭಾಷೆ ಬದಲಾಗಿ , ವಾಸ ಮಾಡುವ ಸ್ಥಳವು ಬದಲಾಗಿ ಮರೆಯಲಾಗದ ಆ ಒಂದು ವರ್ಷ .. ಹೌದು ಅದು ನಾವು ಸರ್ಕಾರಿ ಶಾಲೆಯಲ್ಲಿ (ಹುಬ್ಬಳ್ಳಿ ಮತ್ತು ರಾಣೆಬೆನ್ನೂರು) ಕಲಿತ ದಿನಗಳ ಕಥೆಯು.. ನಮ್ಮ ಮನದಾಳದ ಮಾತುಗಳಿಗಾಗಿ ಮಾಡಿರುವ "ವಿಶೇಷ ಬರಹಗಾರ" ಬ್ಲಾಗ್ ಅಲ್ಲೂ ಸಹ ಪ್ರಕಟಿಸುತ್ತೇವೆ.. & ಇದರಲ್ಲಿ ಕೆಲವು ಲವ್ ಸ್ಟೋರಿಗಳು , ಸೆಂಟಿಮೆಂಟ್'ಗಳು , ಸಸ್ಪೆನ್ಸ್ , ಅಧ್ಯಾತ್ಮ , ಸ್ಪೋರ್ಟ್ಸ್ ... ಎಲ್ಲಾ ಸೇರಿದ ಒಂದು ಸಿನಿಮಾ ಕಥೆಯಾಗಿ ಆಗಬಹುದು .. ಹಾಗೂ ಕೆಲವರಿಗಂತೂ ಸವಿ ಸವಿ ನೆನಪು ಅಂತಾ "ಮೈ ಆಟೋಗ್ರಾಫ್" ಕನ್ನಡ ಚಲನಚಿತ್ರದ ನೆನಪು ಆಗಬಹುದು .. ಕೊನೆಯಲ್ಲಿ ನಾಯಕನಿಗೆ ಮದುವೆ ಆಗುತ್ತೆ .. ಆದರೆ ನಾ ಹೇಳುವ ಕಥೆಯು ಸಂಪೂರ್ಣ ಸ್ವಂತದ್ದು ಮತ್ತು ಈ ಕಥೆಯಲ್ಲಿ ನಾಯಕನಿಗೆ ಇನ್ನೂ ಮದುವೆ ಆಗಿಲ್ಲ.. ಇದು ಒಬ್ಬ ಸ್ನೇಹಿತರು ನೆನಪು ಮಾಡಿಸಿದ ಕಥೆ .. ಸ್ವಂತ ಅನುಭವಗಳ ಒಂದು ವರ್ಷದ ಸರ್ಕಾರಿ ಶಾಲೆಯ ಮತ್ತು ಸ್ನೇಹಿತರ ಕಥೆ.. :)
ದಯವಿಟ್ಟು ಕಾದು ನೋಡಿ ... ಆಮೇಲೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .. ಸತ್ಯವನ್ನು ಬರೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ ಆದರೆ ಈ ಮೊದಲೇ ಆರಂಭಿಸಿದ "ನಾನು ನನ್ನ ಕವನ" ಎಂಬ ಕಾಲ್ಪನಿಕ ಕಥೆಯ ಮುಗಿಸಿದ ನಂತರ , ಈ ಕಥೆಯನ್ನು ಪ್ರಾರಂಭಿಸುತ್ತೇವೆ .. ಎಲ್ಲರಿಗೂ ಶುಭವಾಗಲಿ ..
ದಯವಿಟ್ಟು ಕಾದು ನೋಡಿ ... ಆಮೇಲೆ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .. ಸತ್ಯವನ್ನು ಬರೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ ಆದರೆ ಈ ಮೊದಲೇ ಆರಂಭಿಸಿದ "ನಾನು ನನ್ನ ಕವನ" ಎಂಬ ಕಾಲ್ಪನಿಕ ಕಥೆಯ ಮುಗಿಸಿದ ನಂತರ , ಈ ಕಥೆಯನ್ನು ಪ್ರಾರಂಭಿಸುತ್ತೇವೆ .. ಎಲ್ಲರಿಗೂ ಶುಭವಾಗಲಿ ..
* ಓಂ ಶ್ರೀ ಗಣೇಶಾಯ ನಮಃ *