Monday, 28 May 2012

ವಿಶೇಷ ಬರಹಗಾರ


ವಿಶೇಷ  ಬರಹಗಾರ
********************

ತಾನಲ್ಲಿ ಬರೆಯುವ ಮೊದಲೇ ತಿಳಿದಿರಬೇಕು
ತಾನೇನು ವಿಷಯಗಳ ಅರಿತು ಬರೆಯಬೇಕು
ತನಗೋಸ್ಕರ ಬರೆಯುವ ಸ್ವಾರ್ಥವಿನ್ನು ಸಾಕು
ತನ್ನವರಿಗಾಗಿ ತಾ ಬರೆಯುವುದ ಕಲಿಯಬೇಕು

ತಾನೇನೆಂದು ತಿಳಿದು ಬರೆಯುವ ತಾಳ್ಮೆ ಬೇಕು
ತಾಳಿದವನು ಬಾಳಿಯಾನು ಎಂದು ತಿಳಿದಿರಬೇಕು
ತಳಕು ಬಳಕು ಸುಳ್ಳು ಸೇರಿಸುವುದ ಕೈ ಬಿಡಬೇಕು
ತಪ್ಪಿದರೆ ತಿದ್ದಿ ಬರೆಯುವ ಬುದ್ದಿಯ ಹೊಂದಿರಬೇಕು

ತಾತ್ಕಾಲಿಕ ಸತ್ಯವಾದರೂ ಹತ್ತಿರ ಸೆಳೆಯಬೇಕು
ತಾಯ್ನುಡಿಯ ತಾನೆಂದೆಂದೂ ಉಳಿಸಿ ಬೆಳೆಸಬೇಕು
ತಕ್ಷಣಕ್ಕೆ ತಿಳಿದದ್ದನ್ನು ಬರೆದರೂ ಅರ್ಥವಿರಬೇಕು
ತನ್ನಲ್ಲಿ ವಿಶೇಷ ಬರಹಗಾರ ಆಗುವ ಲಕ್ಷಣವಿರಬೇಕು

|| ಪ್ರಶಾಂತ್ ಖಟಾವಕರ್ ||

Thursday, 24 May 2012

ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಪ್ರತಿಕ್ರಿಯೆ ಪಡೆ


 ಕೆಲವು ಸತ್ಯವನ್ನು ಹೇಳಲು ಇಚ್ಚಿಸುತ್ತೇವೆ.. ಅದೇನೆಂದರೆ ಈ ಅಂತರಜಾಲದ ಬ್ಲಾಗ್ ಲೋಕದಲ್ಲಿ ಈಗ ರಾಜಕೀಯ ಹೆಚ್ಚುತ್ತಿದೆ ಮತ್ತು ಜೊತೆಯಲ್ಲಿ ಜಾತಿಯ ಹೆಸರಲ್ಲಿ ಅಡೆತಡೆಗಳು ಕಂಡು ಬರುತ್ತಿವೆ.. ಹಾಗಾಗಿ ಸುಮ್ಮನೆ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅತ್ಯುತ್ತಮವಾದ ಕಾರ್ಯ .. ನಾವು ಓದಿದ್ದೇವೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲೇಬೇಕಾದ ಅನಿವಾರ್ಯತೆ ಇದ್ದಲ್ಲಿ ಓದುವುದೇ ಕಷ್ಟವಾಗುತ್ತದೆ.. ಹಾಗು ಪ್ರತಿಕ್ರಿಯೆ ವಿಚಾರದಲ್ಲಿ ಇಲ್ಲಿ ವಿವರಿಸಿದಂತೆ ಎಲ್ಲಾ ಲೇಖಕರು ಪ್ರತಿಕ್ರಿಯೆ ಅಪೇಕ್ಷಿಸುವುದು ಸಹಜವಾದ ವಿಚಾರವೇ ಆಗಿದೆ.. ಆದರೆ ನಮ್ಮ ವಯಕ್ತಿಕ ಅಭಿಪ್ರಾಯ ನಾವು ಯಾವುದೇ ರೀತಿಯ ಪ್ರತಿಕ್ರಿಯೆಯ ನಿರೀಕ್ಷೆ ಇಲ್ಲದೆಯೇ ಪ್ರಕಟಣೆ ಹಾಕುತ್ತೇವೆ .. ಆದರೆ ಮೆಚ್ಚುಗೆಯ ನುಡಿಗಳನ್ನು ತಿಳಿಸಿದವರಿಗೆ ಮಾತ್ರ ವಂದನೆಗಳನ್ನು ತಿಳಿಸುವುದನ್ನು ತಪ್ಪಿಸುವುದಿಲ್ಲ.. ಹಾಗು ಮತ್ತೊಬ್ಬರ ಪ್ರಕಟಣೆಗಳಿಗೆ ಉತ್ತರಿಸಲು ಯಾವುದೇ ರೀತಿಯ ಭೇದಭಾವ ಮಾಡುವುದಿಲ್ಲ.. ಹೊಸ ಪ್ರತಿಭೆಗಳೇ ಇರಲಿ ಅಥವಾ ಅನುಭವ ಹೊಂದಿದ ಪ್ರಬುದ್ದ ಲೇಖಕರೇ ಆಗಿರಲಿ , ಯಾರೇ ಇದ್ದರೂ ನಮ್ಮ ಅನಿಸಿಕೆ ಅಭಿಪ್ರಾಯ ಅನುಮಾನಗಳನ್ನು ಪ್ರತಿಕ್ರಿಯೆ ಮೂಲಕ ತಿಳಿಸುವ ಮತ್ತು ಚರ್ಚಿಸುವಲ್ಲಿ ಯಾವ ರೀತಿಯ ಭಯವೂ ಇಲ್ಲ ಮತ್ತು ನಮಗೆಷ್ಟು ತಿಳಿದಿರುತ್ತದೆಯೋ ಅಷ್ಟನ್ನು ಬರೆಯುವುದರಲ್ಲಿ ಯಾವ ತಪ್ಪೂ ಸಹ ಇಲ್ಲ ಎಂದು ಭಾವಿಸುವವರು ನಾವು .. ಇನ್ನು ಇತ್ತೀಚಿಗೆ ಈ ಫೇಸ್ಬುಕ್ ಗುಂಪುಗಳಲ್ಲಿ ಪ್ರತಿಕ್ರಿಯೆ ನೀಡುವ ಮನಸ್ಸಿರುವ ನಮ್ಮಂತಹಾ ಓದುಗರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗುತ್ತಿಲ್ಲ .. :)
ಹಾಗು ಮತ್ತೊಂದು ವಿಚಾರ (ಇಂಗ್ಲೀಷ್ ಅಲ್ಲಿ "ಗಿವ್ ರೆಸ್ಪೆಕ್ಟ್ & ಟೆಕ್ ರೆಸ್ಪೆಕ್ಟ್") ಮರ್ಯಾದೆ ಕೊಟ್ಟು ಮರ್ಯಾದೆ ಪಡೆ ಎನ್ನುವಂತೆ ಇಲ್ಲಿ ಗುಂಪುಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಪ್ರತಿಕ್ರಿಯೆ ಪಡೆ ಎನ್ನುವಂತೆ ವಾತಾವರಣ ನಿರ್ಮಾಣಗೊಂಡಿದೆ .. ಇದಕ್ಕೆ ಸಾಕ್ಷಿ ಒಂದೆರಡು ತಿಂಗಳು ನಾವೇ ನಮ್ಮ ಮನಸ್ಸನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಕಂಡುಕೊಂಡ ಸತ್ಯ .. ಎಷ್ಟೋ ಲೇಖಕರ , ಸ್ನೇಹಿತರ ಕಥೆ ಕವಿತೆಗಳು ಇಷ್ಟವಾದರೂ ಸಹ ಯಾವುದೇ ಪ್ರತಿಕ್ರಿಯೆ ಕೊಡದೆಯೇ ಸುಮ್ಮನೆ ಇದ್ದದ್ದು.. ಹಾಗು ಈ ರೀತಿ ಮಾಡಿದ್ದು ಕೇವಲ ಒಂದು ಗುಂಪಿನಲ್ಲಿ ಮಾತ್ರವಲ್ಲ .. ನಾವು ನಿರ್ವಾಹಕರಾಗಿ ಇರುವ ಸುಮಾರು ಆರೇಳು ಗುಂಪುಗಳಲ್ಲೂ ಸಹ ಯಾವುದೇ ಪ್ರತಿಕ್ರಿಯೆಗಳನ್ನು ಕೊಟ್ಟಿಲ್ಲ .. ಆದರೆ ನಮ್ಮಲ್ಲಿ ವಯಕ್ತಿಕವಾಗಿ ಕೇಳಿಕೊಂಡು , ಪ್ರತಿಕ್ರಿಯೆಗಳನ್ನು ಅಪೇಕ್ಷಿಸಿದವರಿಗೆಲ್ಲಾ ಮನಸ್ಪೂರ್ವಕವಾಗಿ ಸ್ವಾಗತಿಸಿ ಮತ್ತು ಅವರ ಕಥೆ ಕವಿತೆಗಳನ್ನು ಬಿಡುವು ಮಾಡಿಕೊಂಡು ಸಂಪೂರ್ಣ ಓದಿ ಅನಿಸಿಕೆ ಅಭಿಪ್ರಾಯಗಳನ್ನು ನೀಡಿದ್ದೇವೆ .. ಹಾಗು ಕೊನೆಯದಾಗಿ ಹೇಳಬಯಸುವ ವಿಚಾರ ಒಬ್ಬ ಲೇಖಕ + ವಿಮರ್ಶಕನಿಗಿಲ್ಲಿ ಸತ್ಯವನ್ನು ಪ್ರಕಟಿಸುವ + ಪ್ರತಿಕ್ರಿಯಿಸುವ ಸ್ವಾತಂತ್ರ್ಯ ಸಿಗಬೇಕು .. ಅದನ್ನು ಪ್ರಕಟಣೆ ಕೊಡುವ ಬರಹಗಾರರು ಕೊಡಬೇಕು .. ಹಾಗು ಕೆಲವು ಸಮಯ ಸಂಧರ್ಭಗಳಲ್ಲಿ ಪ್ರಕಟಣೆಯ ಕುರಿತಾದ ವಿಚಾರದಲ್ಲಿ ಚರ್ಚೆಯನ್ನು ಮಾಡಿ ಅನುಮಾನ ಸಂಗತಿಗಳ ಬಗೆಹರಿಸುವಲ್ಲಿ ಸಹಕರಿಸಬೇಕು .. ಒಟ್ಟಿನಲ್ಲಿ ಒಂದೇ ಮಾತು ಈಗ ರಾಜಕೀಯ ಈ ಫೇಸ್ಬುಕ್ ಗುಂಪುಗಳಲ್ಲಿ ಹೆಚ್ಚುತ್ತಿದೆ ಹಾಗು ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎನ್ನುವ ನಿಯಮ ಭೇದಗಳು ಸಹ ಅತಿಯಾಗಿ ಕಾಣಿಸಿಕೊಳ್ಳುತ್ತಿದೆ.. ಅದಕ್ಕೆ ಸುಮ್ಮನೆ ಕಥೆ ಕವಿತೆಗಳನ್ನು ಓದಿ (ಕೇಳಿದವರಿಗೆ ಮಾತ್ರ ಪ್ರತಿಕ್ರಿಯೆ ಕೊಟ್ಟು) ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಮಾಡುವುದರಲ್ಲಿ ಯಾವ ರೀತಿಯ ತಪ್ಪು ಅನಿಸುವುದೇ ಇಲ್ಲ ಎಂಬುದು ನಮ್ಮ ಅಭಿಪ್ರಾಯ .. ಹಾಗು ಕೆಲವು ರಹಸ್ಯಗಳನ್ನು ಇಲ್ಲಿ ಹೇಳಲಾಗುವುದಿಲ್ಲ .. ಇಷ್ಟ ಇದ್ದವರು ವಯಕ್ತಿಕವಾಗಿ ಸಂದೇಶಗಳ ಮೂಲಕ ತಿಳಿಯಬಹುದು .. ಎಲ್ಲರಿಗೂ ಸ್ವಾಗತ .. ಹಾಗು ಎಲ್ಲರಿಗೂ ಶುಭವಾಗಲಿ .. ಒಂದೆರಡು ತಿಂಗಳು ಪ್ರೋತ್ಸಾಹದ ಮಾತುಗಳನ್ನು ನಿಲ್ಲಿಸಿದ ನಾವು ಇನ್ನು ಒಂದು ವಾರದ (ಜೂನ್ ಒಂದು) ನಂತರವೇ ಎಲ್ಲಾ ಪ್ರಕಟಣೆಗಳಿಗೆ ಪ್ರತಿಕ್ರಿಯೆ ಹಾಕುತ್ತೇವೆ .. ಆದರೆ ವಯಕ್ತಿಕವಾಗಿ ಪ್ರತಿಕ್ರಿಯೆ ಅಪೇಕ್ಷಿಸುವ ಎಲ್ಲಾ ಸ್ನೇಹಿತರಿಗೂ ಸಹ ಮನಸ್ಪೂರ್ವಕವಾಗಿ ಓದಿ ಮೆಚ್ಚಿ ಪ್ರತಿಕ್ರಿಯೆ ಪ್ರೋತ್ಸಾಹದ ಮಾತುಗಳನ್ನು ತಿಳಿಸಲು ಯಾವುದೇ ರೀತಿಯ ತೊಂದರೆ ಇಲ್ಲ.. ಹಾಗು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು .. ಶುಭ ಮುಂಜಾನೆ .. :)